ಮಡಿಕೇರಿ, ಅ. 23: ಯುವ ಮತ್ತು ಕ್ರೀಡಾ ಸಚಿವಾಲಯದ ವ್ಯಾಪ್ತಿಗೆ ಬರುವ ನೆಹರು ಯುವ ಕೇಂದ್ರವು ಜಿಲ್ಲೆಯ ಯುವ ಕ್ಲಬ್ ಚಟುವಟಿಕೆಗಳ ಪ್ರಚಾರಕ್ಕಾಗಿ ವಿವಿಧ ಯೋಜನೆ ಪ್ರಾರಂಭ ಮಾಡಿದೆ. ಜಿಲ್ಲಾ ಯುವ ಸಂಯೋಜಕ ಬಿ. ಅಲಿ ಸಬ್ರಿನ್ ಒಂದು ವರ್ಷದೊಳಗೆ ಜಿಲ್ಲೆಯಲ್ಲಿ 100 ಹೊಸ ಯುವ ಕ್ಲಬ್‍ಗಳನ್ನು ರಚಿಸಲಿದ್ದು, 1 ಸಾವಿರ ಯುವಕರಿಗೆ ನಾಯಕತ್ವ ತರಬೇತಿ ನೀಡಲಿದ್ದು, ಯುವ ಕ್ಲಬ್‍ಗಳಿಗೆ ಕ್ರೀಡಾ ಸಾಮಗ್ರಿ ನೀಡಲಾಗುವದು ಎಂದರು. ಕ್ರೀಡಾ ಪಂದ್ಯಾವಳಿ, ಸ್ವಚ್ಛ ಭಾರತ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯುವಕರಿಗೆ ವೃತ್ತಿಪರ ತರಬೇತಿ ನೀಡಲು ಆರ್ಥಿಕ ನೆರವು ನೀಡುವದು. ಆಸಕ್ತ ಯುವ ಕ್ಲಬ್‍ಗಳು 9591303604, 9901312526 ಸಂಪರ್ಕಿಸಬಹುದು.