ಗೋಣಿಕೊಪ್ಪಲು, ಅ. 23: ಕಾಂಗ್ರೆಸ್‍ನ ಹಿರಿಯ ಮುಖಂಡ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಿಡುಗಡೆ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ನಡೆಯಿತು.

ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮುಂದಾಳತ್ವದಲ್ಲಿ ನಗರದ ಬಸ್ ನಿಲ್ದಾಣದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಪಿ.ಕೆ. ಪ್ರವೀಣ್, ಬಿ.ಎನ್. ಪ್ರಕಾಶ್, ಕರ್ತಂಡ ಸೋಮಣ್ಣ, ನಾಮೇರ ಅಂಕಿತ್ ಪೊನ್ನಪ್ಪ, ಅಪ್ರಿದ್, ಎಂ.ಆರ್. ಅನೀಸ್, ನಯಾಜ್ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.

ಕುಶಾಲನಗರ : ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಸಂಭ್ರಮಾಚರಣೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಪಂಚಾಯ್ತಿ ಜನಪ್ರತಿನಿಧಿಗಳಾದ ಕುಶಾಲನಗರದ ಸುಂದರೇಶ್, ಸುಂಟಿಕೊಪ್ಪ ರಜಾಕ್, ಪ್ರಮುಖರಾದ ಚಂದ್ರು, ಫಜಲುಲ್ಲಾ, ದೇವು, ಪರಮೇಶ್, ರವಿ ಮತ್ತಿತರರು ಇದ್ದರು.