ಸುಂಟಿಕೊಪ್ಪ, ಅ. 22: ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನ್ಯಾಯಬೆಲೆ ಅಂಗಡಿ ಯಲ್ಲಿ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳ ಕೊನೆಯೊಳಗೆ ಆಹಾರ ಧಾನ್ಯಗಳನ್ನು ವಿತರಿಸುವಂತೆ ಸೂಚಿಸಿದ್ದಾರೆ.
ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನ್ಯಾಯಬೆಲೆ ಅಂಗಡಿ ಯಲ್ಲಿ ಪಡಿತರ ಚೀಟಿದಾರರಿಗೆ ಸರಕಾರದಿಂದ ವಿತರಿಸಲಾಗುವ ಆಹಾರ ಧಾನ್ಯಗಳನ್ನು ಬಸವನ ಹಳ್ಳಿಯ ಲ್ಯಾಂಪ್ ಸೊಸೈಟಿಯ ಸಿಬ್ಬಂದಿ ಸರಿಯಾಗಿ ಪೂರೈಸದೆ ಪಡಿತರ ದೊರೆಯುತ್ತಿರಲಿಲ್ಲ. ನ್ಯಾಯಬೆಲೆ ಸಿಬ್ಬಂದಿಗಳು ತಮಗೆ ಮನಬಂದಂತೆ ಆಗಮಿಸಿ ವಿತರಿಸುತ್ತಿ ದ್ದಾರೆ ಎಂಬ ಬಗ್ಗೆ ಜನತೆಯು ಜನಪ್ರತಿನಿಧಿಗಳೊಂದಿಗೆ ಅಳಲನ್ನು ತೊಡಿಕೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿಗೆ ತೆರಳಿದ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಪಂಚಾಯಿತಿ ಸದಸ್ಯರುಗಳಾದ ಸಿ. ಚಂದ್ರ, ಎ. ಶ್ರೀಧರ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಪಿ. ಆರ್. ಸುನಿಲ್ಕುಮಾರ್ ಕುಂದುಕೊರತೆ ಗಳನ್ನು ಆಲಿಸಿದರಲ್ಲದೆ; ದೂರುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ 20 ರಿಂದ 30 ರ ಅಪರಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ದಾಗಿ ಅಂಗಡಿಯ ಮೇಲ್ವಿಚಾರಕ ಯೋಗಣ್ಣ ಭರವಸೆ ನೀಡಿದರು.