ಮಡಿಕೇರಿ, ಅ. 22: ಕೆನರಾ ಬ್ಯಾಂಕ್ ವತಿಯಿಂದ ಗ್ರಾಹಕರ ಸೇವೆಗಾಗಿ ಆರಂಭಿಸಲಾಗಿರುವ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಡಿ ವಿಮಾ ಸೌಲಭ್ಯವನ್ನು ಮಕ್ಕಂದೂರು ಕೆನರಾ ಬ್ಯಾಂಕ್‍ನಿಂದ ಗ್ರಾಹಕರ ಕುಟುಂಬಸ್ಥರಿಗೆ ಒದಗಿಸಲಾಗಿದೆ.

ಮಕ್ಕಂದೂರುವಿನ ಮೇಘತ್ತಾಳು ನಿವಾಸಿ ಬಿ.ಕೆ. ವಸಂತ್ ಎಂಬವರು 4 ವರ್ಷಗಳ ಹಿಂದೆ ವಿಮೆ ಮಾಡಿಸಿದ್ದು, ಇದೀಗ ಅವರು ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನೆಲೆಯಲ್ಲಿ ಯೋಜನೆಯಡಿಯಲ್ಲಿ ರೂ. 2 ಲಕ್ಷ ಮೊತ್ತದ ವಿಮೆ ಲಭಿಸಿದೆ. ವಿಮೆಯ ಮೊತ್ತದ ಪಾಸ್ ಪುಸ್ತಕವನ್ನು ಬ್ಯಾಂಕ್‍ನ ವ್ಯವಸ್ಥಾಪಕಿ ಲೀಲಾವತಿ ಅವರು ಮೃತರ ಪತ್ನಿ ಬಿ.ವಿ. ಇಂದಿರಾ ಅವರಿಗೆ ನೀಡಿದರು. ಈ ಯೋಜನೆಯಡಿ ಗ್ರಾಹಕರು ವರ್ಷಕ್ಕೆ ಕೇವಲ ರೂ. 330 ಮಾತ್ರ ಪಾವತಿಸಬೇಕಿದೆ. ವ್ಯಕ್ತಿ ಮೃತಪಟ್ಟಾಗ ಕುಟುಂಬಸ್ಥರಿಗೆ ಅದರ ಮೊತ್ತ ಲಭಿಸಲಿದೆ. ವಸಂತ್ ನಾಲ್ಕು ಕಂತುಗಳನ್ನು ಪಾವತಿಸಿದ್ದರು ಎಂದು ಮಹಿತಿ ನೀಡಿದರು.

ಈ ಸಂದರ್ಭ ಬ್ಯಾಂಕ್‍ನ ಸಿಬ್ಬಂದಿಗಳು, ಗ್ರಾಹಕರು ಹಾಜರಿದ್ದರು.