ವೀರಾಜಪೇಟೆ, ಅ. 22: ವ್ಯಕ್ತಿಯೊಬ್ಬರ ಮೂತ್ರಪಿಂಡ ದಿಂದ 800 ಗ್ರಾಂ. ತೂಕದ ಕಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕು ಕಡಂಗ ಗ್ರಾಮದ ನಿವಾಸಿ ಇಬ್ರಾಹಿಂ ಅವರ ಪುತ್ರ ರಫೀಕ್ (37) ಎಂಬವರು ಹೊಟ್ಟೆನೋವು ಎಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಮೂತ್ರಪಿಂಡದಲ್ಲಿ ಕಲ್ಲು ಇರುವದು ದೃಢಪಟ್ಟಿದೆ.
ಸರ್ಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಕÀ ಡಾ. ವಿಶ್ವನಾಥ್ ಸಿಂಪಿ ಮತ್ತು ಅರವಳಿಕೆಯ ವೈದ್ಯರಾದ ಡಾ.ಸುರೇಶ್ ಅವರು ಮತ್ತು ಸಿಬ್ಬಂದಿ ಸತತ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 800 ಗ್ರಾಂ. ತೂಕದ ಕಲ್ಲನ್ನು ಮೂತ್ರಪಿಂಡದಿಂದ ಹೊರತೆಗೆದಿದ್ದಾರೆ.