ಮಡಿಕೇರಿ, ಅ. 22: ಮಡಿಕೇರಿ ತಾಲೂಕಿನ ಕೋಪಟ್ಟಿ ಬಾಡಗ ಗ್ರಾಮ ನಿವಾಸಿ ತೊತ್ತಿಯನ ಸುಂದರ ಅವರ ಪುತ್ರ ಕಾವ್ಯಾನಂದ(ಕಂದ-40) ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವನೆ ಮಾಡಿ ನಂತರ ನೇಣು ಬಿಗಿದುಕೊಂಡಿದ್ದಾರೆ. ಮೃತರ ಪತ್ನಿ ಒಂದು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಮೃತರು ಪುತ್ರನನ್ನು ಅಗಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.