ಸೋಮವಾರಪೇಟೆ, ಅ. 21 : ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಜೇಸಿ ಸಪ್ತಾಹದ ಅಂಗವಾಗಿ ಪಟ್ಟಣದಲ್ಲಿ ಮಕ್ಕಳ ಮ್ಯಾರಥಾನ್ ನಡೆಯಿತು. ಮ್ಯಾರಥಾನ್ಗೆ ಜೇಸಿ ವೇದಿಕೆ ಮುಂಭಾಗ ಉದ್ಯಮಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಮಕ್ಕಳಿಗೆ ನಿಧಾನವಾಗಿ ಸೈಕಲ್ ಚಾಲಿಸುವ ಸ್ಪರ್ಧೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಸಾರ್ವಜನಿಕರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಾಲಿಸುವ ಸ್ಪರ್ಧೆ, ನಂಜಮ್ಮ ಸಮುದಾಯ ಭವನದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಬಿ.ಜಿ.ಪುರುಷೋತ್ತಮ್, ಕಾರ್ಯದರ್ಶಿ ಉಷಾರಾಣಿ, ಕಾರ್ಯಕ್ರಮ ಉಪಾಧ್ಯಕ್ಷ ಎಸ್. ಆರ್. ವಸಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.