ಸೋಮವಾರಪೇಟೆ, ಅ. 21: ಜೇಸಿ ಸಂಸ್ಥೆಯ ವತಿಯಿಂದ ನಂಜಮ್ಮ ಸಮುದಾಯ ಭವನದಲ್ಲಿ ಆಯೋಜಿಸಿರುವ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಯಮಿ ಎಂ. ನಾಗರಾಜ್ ಉದ್ಘಾಟಿಸಿದರು. ಸಮೃದ್ಧ ಭಾರತ ಕಟ್ಟುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾದುದು. ಯುವಶಕ್ತಿಯ ಸದ್ಭಳಕೆಯಾಗ ಬೇಕಾದರೆ ಸೂಕ್ತ ಮಾರ್ಗದರ್ಶನ ಬೇಕಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್, ಕಾರ್ಯದರ್ಶಿ ಉಷಾರಾಣಿ, ಮಾಜಿ ಅಧ್ಯಕ್ಷ ಕೆ. ಎ. ಪ್ರಕಾಶ್, ಕಾರ್ಯಕ್ರಮ ಉಪಾಧ್ಯಕ್ಷ ಎಸ್.ಆರ್. ವಸಂತ್, ಜೇಸಿರೇಟ್‍ನ ಸುಮಲತಾ ಪುರುಷೋತ್ತಮ್, ವಿದ್ಯಾ ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.