ಮಡಿಕೇರಿ, ಅ. 21: ಬೇಂಗೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಬೇಂಗೂರು, ಕೊಳಗದಾಳು, ಕೊಟ್ಟೂರು, ಬಿ.ಬಾಡಗ, ಐವತ್ತೋಕ್ಲು ಗ್ರಾಮಗಳ ಗ್ರಾಮ ಸಭೆಯು ತಾ. 31 ರಂದು ಪೂರ್ವಾಹ್ನ 11 ಗಂಟೆಗೆ ಚೇರಂಬಾಣೆ ಸ.ಹಿ.ಪ್ರಾ. ಶಾಲೆಯಲ್ಲಿ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಅಶೋಕ್ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಚಿಕ್ಕಬಸವಯ್ಯ ಅವರ ಉಸ್ತುವಾರಿಯಲ್ಲಿ ನಡೆಯಲಿದೆ.