ಮಡಿಕೇರಿ, ಅ. 21: ಗುಡ್ಡೆಹೊಸೂರು ಸಮೀಪದ ಬೈಚನಹಳ್ಳಿಯ ಮಡಿಕೇರಿ- ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಜಾನುವಾರುಗಳು ನಿತ್ಯ ಅಡೆತಡೆಯಾಗಿವೆ. ಮೊದಲೇ ಅಪಘಾತ ವಲಯವಾಗಿರುವ ಈ ಸ್ಥಳದಲ್ಲಿ ಜಾನುವಾರುಗಳು ಅತೀ ವೇಗದಿಂದ ಬರುವ ವಾಹನಗಳಿಗೆ ಯಮದೂತಗಳ ಹಾಗೆ ಕುಳಿತಿರುತ್ತವೆ- ನಿಂತಿರುತ್ತವೆ. ಜಾನುವಾರು ಗಳ ಮಾಲೀಕರ ನಿರ್ಲಕ್ಷ್ಯದಿಂದ ಹೆದ್ದಾರಿಯ ಮಧ್ಯವೇ ವಿಶ್ರಮಿಸುವ ಇವುಗಳಿಂದ ವಾಹನ ಸವಾರರಿಗೇ ಅಲ್ಲದೆ ಜಾನುವಾರುಗಳ ಜೀವಕ್ಕೂ ಅಪಾಯ ಖಂಡಿತ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಪ್ರಯಾಣಿಕರ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿರುತ್ತದೆ, ಅಲ್ಲದೇ ಜಾನುವಾರುಗಳ ಮಾಲೀಕರು ಕೂಡ ಅವುಗಳನ್ನು ಅನಾಥವಾಗಿ ಬಿಡದಿರುವ ಹಾಗೆ ಗಮನಹರಿಸಬೇಕಾಗಿರುತ್ತದೆ.