ನಾಪೋಕ್ಲು, ಅ. 21: ಶ್ರೀ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ತೀರ್ಥ ಸಂಗ್ರಹಣೆಗೆ ಪ್ಲ್ಲಾಸ್ಟಿಕ್ ಬಾಟಲಿ, ಬಿಂದಿಗೆಗಳನ್ನು ನಿಷೇಧಿಸಿರುವದು ಸ್ವಾಗತಾರ್ಹ. ಆದರೆ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದಿರುವದಕ್ಕೆ ಕೊಡಗು ಹಕ್ಕು ಸಂರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ತೀರ್ಥೋದ್ಭವ ಸಂದರ್ಭ ಸ್ನಾನಕೊಳದ ಬಳಿ ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ಭಕ್ತರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರನ್ನು ವಿಚಾರಿಸಿದರೆ ಅಧ್ಯಕ್ಷರು ಹೇಳಿದ್ದಾರೆಂದು ತಿಳಿಸಿದ್ದು, ಅಧ್ಯಕ್ಷರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಯಾವದೇ ಪ್ರತಿಕ್ರಿಯೆಯನ್ನು ನೀಡಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ಮಾತೆಯ ಮಣ್ಣಿನಲ್ಲಿ ಇದು ಭಕ್ತರಿಗೆ ಮಾಡಿದ ಅನ್ಯಾಯವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.