ಮಡಿಕೇರಿ, ಅ. 21: ಕೊಡಗು ಜಿ.ಪಂ. ನೂತನ ಆಡಳಿತ ಭವನ ಲೋಕಾರ್ಪಣೆ ಸೇರಿದಂತೆ ಇತರ ಕಾರ್ಯಕ್ರಮಗಳ ಉದ್ಘಾಟನೆ ಸಂಬಂಧ; ತಾ. 25 ರಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿಗದಿತ ಕೊಡಗು ಪ್ರವಾಸ ರದ್ದುಗೊಂಡಿದೆ ಎಂದು ವಿಶ್ವಾಸನೀಯ ಮೂಲಗಳಿಂದ ‘ಶಕ್ತಿ’ಗೆ ತಿಳಿದು ಬಂದಿದೆ.

ಅನ್ಯ ಕಾರ್ಯಕ್ರಮಗಳ ಸಂಬಂಧ ತಾ. 25 ರಂದು ಮುಖ್ಯಮಂತ್ರಿಗಳ ಪ್ರವಾಸದಲ್ಲಿ ಈ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.