ಶನಿವಾರಸಂತೆ, ಅ. 20: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯಪಾನ ಮಾಡಿ ತಾ. 16ರಂದು ಸ್ಕೂಟರ್ (ಕೆಎ 13 ಇಜೆ- 8013) ಚಾಲಿಸಿದ ಆರೋಪಿಗೆ ನ್ಯಾಯಾಲಯ ರೂ. 11 ಸಾವಿರ ದಂಡ ವಿಧಿಸಿದೆ. ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ದುಂಡಳ್ಳಿ ಗ್ರಾಮದ ಎಸ್.ಕೆ. ಶಾಂತಮಲ್ಲಪ್ಪ ಎಂಬವರು ಮದ್ಯಪಾನ ಮಾಡಿ ಸ್ಕೂಟರ್ ಚಾಲಿಸುತ್ತಿದ್ದುದು ಪತ್ತೆಯಾಗಿದ್ದು, ಪೊಲೀಸ್ ಠಾಣಾಧಿಕಾರಿ ಕೃಷ್ಣ ನಾಯಕ್ ಪ್ರಕರಣ ದಾಖಲಿಸಿ ಸೋಮವಾರಪೇಟೆ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯ ಆರೋಪಿ ಶಾಂತಮಲ್ಲಪ್ಪ ಅವರಿಗೆ ರೂ. 11 ಸಾವಿರ ದಂಡ ವಿಧಿಸಿದೆ. ಆರೋಪಿ ದಂಡ ಪಾವತಿಸಿ ಸ್ಕೂಟರ್ ಬಿಡಿಸಿಕೊಂಡಿದ್ದಾರೆ.