ಮಡಿಕೇರಿ, ಅ. 20: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟಗಳು, ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಜನ ಮೇಳಾದ ಪೂರ್ವ ಭಾವಿ ಸಭೆ ನಡೆಯಿತು.
ವೀರಾಜಪೇಟೆಯ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಮನೆಯಂಡ ಶೀಲಾ ಬೋಪಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ವಿವಿಧ ಇಲಾಖೆ ಹಾಗೂ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ನವೆಂಬರ್ 10 ರಂದು ಪೊನ್ನಂಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಲಾಗಿದೆ ಎಂದರು.
ಯುವಜನ ಮೇಳದಲ್ಲಿ ಯುವಕ, ಯುವತಿಯರಿಗೆ ವೈಯಕ್ತಿಕ ಸ್ಪರ್ಧೆಗಳಾದ ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ ಹಾಗೂ ಗುಂಪು ಸ್ಪರ್ಧೆಯಾದ ಗೀಗೀ ಪದ (5 ಜನ), ಕೋಲಾಟ (12 ಜನ), ಜಾನಪದ ನೃತ್ಯ (12 ಜನ), ಭಜನೆ (8 ಜನ), ಜನಪದ ಗೀತೆ (6 ಜನ) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಯುವತಿಯರಿಗಾಗಿ ಜೋಳ, ರಾಗಿ ಬೀಸುವ ಪದ (2 ಜನ), ಸೋಬಾನೆ ಪದ (4 ಜನ) ಆಯೋಜಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ನಿಸರ್ಗ ಯುವತಿ ಮಂಡಳಿಯ ಅಧ್ಯಕೆÀ್ಷ ರೇಖಾ ಶ್ರೀಧರ್, ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸದಸ್ಯ ಇಂದು ನಾಣಯ್ಯ, ವೀರಾಜಪೇಟೆ ತಾಲೂಕು ಒಕ್ಕೂಟದ ಸದಸ್ಯ ರಾಮಕೃಷ್ಣ ಹಾಜರಿದ್ದರು.