ನಾಪೋಕ್ಲು, ಅ. 20: ವಿದ್ಯಾರ್ಥಿಗಳು ಉತ್ತಮ ಆಚಾರ, ವಿಚಾರ, ಸಹಕಾರ ಸ್ನೇಹ ಮನೋಭಾವಗಳನ್ನು ಬೆಳೆಸಿಕೊಂಡು ಪ್ರಜ್ಞಾವಂತ ಪ್ರಜೆಗಳಾಗಿ ಬದುಕಬೇಕು ಎಂದು ಜಿ.ಪಂ. ಸದಸ್ಯೆ ಹೊಸಮನೆ ಕವಿತಾ ಪ್ರಭಾಕರ್ ಹೇಳಿದರು.

ಚೇರಂಗಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚೇರಂಬಾಣೆ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕದ ವತಿಯಿಂದ ಏರ್ಪಡಿಸ ಲಾಗಿದ್ದ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅರುಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಆನೆರ ಜಾನಕಿ, ಪೆರುಬಾಯಿ ಪ್ರಮೀಳ, ಕಾರ್ಯದರ್ಶಿ ದಾಯನ ಶಿವಾಜಿ, ಉಪನ್ಯಾಸಕ ದಾಯನ ರಾಮಕೃಷ್ಣ, ಚೇರಂಗಾಲ ಶಾಲೆಯ ಶಿಕ್ಷಕಿ ಟೈನಿ, ಶಿಕ್ಷಕರಾದ ಪರಮೇಶ್, ಗಣೇಶ್, ಹೇಮಾವತಿ, ಜಶ್ಮಿ ಪಾಲ್ಗೊಂಡಿದ್ದರು. ಶಿಬಿರಾಧಿಕಾರಿ ಕೆ.ಆರ್. ರಮೇಶ್, ಸಹಶಿಬಿರಾಧಿಕಾರಿ ಪೊನ್ನಚನ ರೋಹಿತ್ ಉಪಸ್ಥಿತರಿದ್ದರು.