ಮಡಿಕೇರಿ, ಅ. 19: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದ ಬಣ್ಣಮೊಟ್ಟೆ ನಿವಾಸಿ ಶಿವಚಾರ್ಯರ ವಿನಯ್ ಎಂಬವರ ಮನೆಯ ಕಾಫಿ ಕಣದಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಮರಳನ್ನು ಸಂಗ್ರಹಿಸಿಟ್ಟಿದ್ದನ್ನು ಪೊಲೀಸರು ದಾಳಿ ನಡೆಸಿ ಅಂದಾಜು 9 ಟಿಪ್ಪರ್ ಲೋಡ್ ಮರಳು ಮತ್ತು ಮರಳನ್ನು ಸಾಗಿಸಲು ಉಪಯೋಗಿಸಿದ ಒಂದು ಟ್ರ್ಯಾಕ್ಟರ್, 2 ಪ್ಲಾಸ್ಟಿಕ್ ಬಾಂಡ್ಲಿ, 2 ಗುದ್ದಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮರಳಿನ ಅಂದಾಜು ಮೌಲ್ಯ ರೂ. 1 ಲಕ್ಷ ಮತ್ತು ಟ್ರ್ಯಾಕ್ಟರ್ ಅಂದಾಜು ಮೌಲ್ಯ ರೂ. 3 ಲಕ್ಷ ಆಗಿರುತ್ತದೆ. ಆರೋಪಿ ಶಿವಚಾರ್ಯರ ವಿನಯ್ ತಲೆಮರೆಸಿಕೊಂಡಿದ್ದಾರೆ.