ಶ್ರೀಮಂಗಲ, ಅ. 19: ಶ್ರೀಮಂಗಲ ಸುತ್ತಮುತ್ತ ಕಾಡಾನೆಗಳ ಹಾವಳಿ ತಡೆಗಟ್ಟುವ ದಿಸೆಯಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ಕ್ರಮದ ಭರವಸೆ ದೊರಕಿದೆ ಎಂದು ಶ್ರೀಮಂಗಲ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಾಮಾಡ ಕಟ್ಟಿ ಮಂದಯ್ಯ ತಿಳಿಸಿದ್ದಾರೆ. ಆ ದಿಸೆಯಲ್ಲಿ ಸಮಿತಿಯು ಇಲಾಖೆ ವಿರುದ್ಧ ದಾಖಲಿಸಲು ನಿರ್ಧರಿಸಿದ್ದ ಮೊಕದ್ದಮೆ ಕುರಿತು ತೀರ್ಮಾನವನ್ನು ಮುಂದೂಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.