ಚೆಟ್ಟಳ್ಳಿ, ಅ. 18: ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸೌತ್ ಇಂಡಿಯಾಸ್ ಬಿಗ್ಗೆಸ್ಟ್ ಆಫ್ ರೋಡ್ ಫೆಸ್ಟ್ ಸೀಜನ್ -2ನ ಆನ್ ದ ರಾಕ್ಸ್‍ನಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್‍ಚಂಗಪ್ಪ ಹಾಗೂ ಕಕ್ಕಬೆಯ ಕೋಟೇರ ನಿಕಿಲ್ ಸೋಮಯ್ಯ ಓಪನ್‍ಕ್ಲಾಸ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಿದ್ದ ಆಫ್ ರೋಡ್‍ನಲ್ಲಿ ಪೆಟ್ರೋಲ್, ಡೀಸೆಲ್, ಓಪನ್‍ಕ್ಲಾಸ್ ಮಾಡಲಾಗಿತ್ತು. ಸುಮಾರು 1.50 ಕಿ.ಮೀ. ಕ್ರಮಿಸಬೇಕಿತ್ತಾದರೂ, ಬೆಟ್ಟಗುಡ್ಡ, ಇಳಿಜಾರು, ಕೆಸರಿನ ದಾರಿಯಲ್ಲಿ ಕ್ರಮಿಸಬೇಕಿತ್ತು. ಚಿಕ್ಕಮಗಳೂರು, ಮಂಗಳೂರು, ಹಾಸನ, ಸಕ್ಲೇಶ್‍ಪುರ, ಬೆಂಗಳೂರು, ಮೈಸೂರು, ಕೇರಳದ ರ್ಯಾಲಿ ಪಟುಗಳು ಸೇರಿ 43 ಸ್ಪರ್ಧಿಗಳು ಭಾಗವಹಿಸಿದ್ದರು. ಓಪನ್‍ಕ್ಲಾಸ್‍ನಲ್ಲಿ ಕೊಡಗಿನಿಂದ ಡ್ರೈವರ್ ಚೇತನ್ ಚಂಗಪ್ಪ ಹಾಗೂ ಕೋಡ್ರೈವರಾಗಿ ನಿಕಿಲ್ ಸೋಮಯ್ಯ ಉತ್ತಮ ಪ್ರದರ್ಶನ ನೀಡಿದರಾದರೂ ಕೇವಲ 2 ಸೆಕೆಂಡುಗಳ ಅಂತರದಿಂದ ಮೊದಲ ಸ್ಥಾನ ಕೈತಪ್ಪಿ ದ್ವಿತೀಯ ಸ್ಥಾನವನ್ನು ಪಡೆದು ಟ್ರೋಫಿ ಹಾಗೂ ರೂ.15,000ರ ಗಿಫ್ಟ್ ಓಚರ್ ಪಡೆದರು. ಡೇಸೆಲ್‍ಕ್ಲಾಸ್‍ನಲ್ಲಿ ಡ್ರೈವರಾಗಿ ಬಾಳೆಲೆಯ ಪಾರುವಂಗಡ ಪೂಣಚ್ಚ ಹಾಗೂ ಕೋಡ್ರೈವರಾಗಿ ಸುಂಟಿಕೊಪ್ಪ ಮಾಳೆಯಂಡ ಬೋಪಣ್ಣ ಭಾಗವಹಿಸಿ ಮೂರನೇ ಸ್ಥಾನಕ್ಕೆ ತಲಪಿದ್ದರು.