ಮಡಿಕೇರಿ, ಅ. 18: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪÀÇರಕವಾಗಿ ನಡೆಯಬೇಕಾಗಿರುವ ಗ್ರಾಮ ಪಂಚಾಯ್ತಿ ಮಟ್ಟದ ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ಹಾಜರಾಗದೇ ಇರುವದರಿಂದ ಸಭೆÉಯ ಉದ್ದೇಶ ವಿಫಲವಾಗುತ್ತಿದೆ ಎಂದು ಕಡಗದಾಳು ಗ್ರಾ.ಪಂ. ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾ.ಪಂ ಜನಪ್ರತಿನಿಧಿಗಳ ಒಕ್ಕೂಟ’ವನ್ನು ಅಸ್ತಿತ್ವಕ್ಕೆ ತಂದು ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸುವದಾಗಿ ತಿಳಿಸಿದರು. ಕಡಗದಾಳು ಗ್ರಾ.ಪಂ. ಕೆಡಿಪಿ ಸಭೆಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಯಲ್ಲಿ 30 ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು. ಆದರೆ, ಪಂಚಾಯಿತಿ ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ವಿದ್ಯುತ್ ಇಲಾಖೆ ಹೊರತು, ಇನ್ನುಳಿದ ಯಾವದೇ ಅಧಿಕಾರಿಗಳು ಪಾಲ್ಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಡಗದಾಳು ಕೆಡಿಪಿ ಸಭೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ 15 ದಿನ ಮುಂಚಿತವಾಗಿಯೇ ಜ್ಞಾಪನಾ ಪತ್ರ ನೀಡಲಾಗಿತ್ತು. ಹೀಗಿದ್ದೂ ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿರುವದರ ವಿರುದ್ಧ ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಆದೇಶ ಪಾಲನೆಯ ನಿಟ್ಟಿನಲ್ಲಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯ್ತಿಗಳಿಗೆ ನಿಗದಿತ ದಿನಾಂಕದ ಒಳಗೆ ಕೆಡಿಪಿ ಸಭೆ ನಡೆಸುವಂತೆ ಸೂಚಿಸುತ್ತಾರೆ. ಅದೇ ರೀತಿ ಪ್ರತಿ ಕೆಡಿಪಿ ಸಭೆಗಳಿಗೆ ಪಾಲ್ಗೊಳ್ಳುವಂತೆ ವಿವಿಧ ಇಲಾಖಾ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆ, ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಡಗದಾಳು ಗ್ರಾ.ಪಂ. ಸದಸ್ಯರಾದ ರಮೇಶ್ ಆಚಾರ್ಯ, ಪÀÅಷ್ಪಾವತಿ ರೈ, ರಮೇಶ್ ರೈ ಹಾಗೂ ಪೆÀÇನ್ನಚಂಡ ರಮೇಶ್ ಉಪಸ್ಥಿತರಿದ್ದರು.