ಮಡಿಕೇರಿ, ಅ. 18: ಕರ್ನಾಟಕ ವಕ್ಫ್ ಮಂಡಳಿಯಿಂದ ಪೇಶ್ ಇಮಾಮ್ ಮತ್ತು ಮೌಜನ್ ಇವರಿಗೆ ಮಾಸಿಕ ಗೌರವಧನ ನೀಡುತ್ತಿದ್ದು; ಸಂಭಾವನೆ ಪಡೆಯುತ್ತಿರುವವರು, ತಾವು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣದೊಂದಿಗೆ ಆಧಾರ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಮತ್ತು ಹಾಜರಾತಿ ದಾಖಲೆಯನ್ನು ತಾ. 20 ರೊಳಗೆ ಕೊಡಗು ವಕ್ಫ್ ಮಂಡಳಿ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ತಪ್ಪಿದಲ್ಲಿ ಅಂತಹವರಿಗೆ ಸರಕಾರದಿಂದ ಲಭಿಸುವ ಗೌರವಧನ ದೊರಕದು ಎಂದು ಜಿಲ್ಲಾ ಮಂಡಳಿ ಕಾರ್ಯದರ್ಶಿ ಸಯಿದ್ ರೆಹಮಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.