ಮಡಿಕೇರಿ, ಅ. 16 : ನಗರದ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್)ಕ್ಕೆ ಕರ್ನಾಟಕ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಕಾಯಕಲ್ಪದೊಂದಿಗೆ ಈಗ ಇರುವಂತಹ 50 ಮಂದಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಹೆಚ್ಚುವರಿಯಾಗಿ ಒಟ್ಟು ನೂರು ಮಂದಿ ಮಕ್ಕಳು ಏಕ ಕಾಲಕ್ಕೆ ತಂಗುವ ದಿಸೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದೆ. ಈ ಸಂಬಂಧ ಈಗಾಗಲೇ ಸರಕಾರಕ್ಕೆ ಸಂಬಂಧಿಸಿದ ಇಲಾಖೆ ಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.ಕ್ರೀಡೆಯ ತವರು ಜಿಲ್ಲೆಯಾಗಿರುವ ಕೊಡಗಿನ ಕೇಂದ್ರ ಸ್ಥಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಸಕ್ತ ಮಕ್ಕಳ ಸಂಖ್ಯೆ ಏರಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಹಾಲೀ ಇರುವ ಕಟ್ಟಡಕ್ಕೆ ಪೂರಕವಾಗಿ 100 ವಿದ್ಯಾರ್ಥಿಗಳಿಗೆ ವ್ಯವಸ್ಥೆಯೊಂದಿಗೆ ನೂತನ ವಸತಿ ನಿಲಯ ನಿರ್ಮಿ¸ Àಲಾಗುವದು ಎಂದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಅವರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.ಕಾಯಕಲ್ಪ : ಸಧ್ಯದಲ್ಲಿ ಜಿ.ಪಂ. ಇಂಜಿನಿಯರಿಂಗ್ ವಿಭಾಗದಿಂದ ನಿರ್ಮಿತಿ ಕೇಂದ್ರದ ಮುಖಾಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವದು ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಮೈದಾನದ ಅಲ್ಲಲ್ಲಿ ಹಾನಿಗೊಂಡಿರುವ ತಡೆಗೋಡೆಗೆ ಕಾಯಕಲ್ಪ ನೀಡಲಾಗುವದು ಎಂದರು. ಅಲ್ಲದೆ ಈಗಿರುವ ಕಟ್ಟಡದ ಅಲ್ಲಲ್ಲಿ ಮೇಲ್ಛಾವಣಿ ಸೀಟುಗಳು ಹಾನಿ ಗೊಂಡಿದ್ದು, ದುರಸ್ತಿ ಆಗಬೇಕಿದೆ ಎಂದು ಬೊಟ್ಟು ಮಾಡಿದರು.
ಈಜು ಕೊಳಕ್ಕೆ ಚಾಲನೆ : ಈತನಕ ಕೆಟ್ಟು ನಿಂತಿರುವ ಈಜು ಕೊಳಕ್ಕೆ ನೀರಿನ ಸೌಲಭ್ಯದೊಂದಿಗೆ ಮೋಟಾರು ಯಂತ್ರ ಸರಿಪಡಿಸ ಲಾಗಿದೆ. ಮುಂದಿನ ವಾರದಿಂದ ಈಜು ಕೋಳ ಕಾರ್ಯಾರಂಭ ಗೊಳ್ಳಲಿದೆ ಎಂದು ಅಧಿಕಾರಿ ಮಾಹಿತಿ ನೀಡುತ್ತಾ, ಆಸಕ್ತ ಸಾರ್ವಜನಿಕರು ಈ ಹಿಂದಿನಂತೆ ಈಜು ಕೊಳದ ಸದುಪ ಯೋಗ ಪಡೆಯಬಹುದು ಎಂದು ಸಲಹೆ ಮಾಡಿದರು.
(ಮೊದಲ ಪುಟದಿಂದ) ಆ ದಿಸೆಯಲ್ಲಿ ಈಜುಕೊಳ ಆವರಣ ಹಾಗೂ ಮಕ್ಕಳ ವಸತಿಗೆ ಹೊಂದಿಕೊಂಡಿರುವ ಇಲಾಖೆಯ ಕಚೇರಿ ಎದುರು ‘ಇಂಟರ್ ಲಾಕಿಂಗ್’ ಇತ್ಯಾದಿ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಒಳಾಂಗಣ ಕ್ರೀಡಾಂಗಣ ಮತ್ತು ಇತರೆಡೆ ಅವಶ್ಯಕ ಶೌಚಾಲಯ, ನೀರಿನ ಸೌಲಭ್ಯ, ಬೆಳಕಿನ ವ್ಯವಸ್ಥೆ ಮುಂತಾದ ವ್ಯವಸ್ಥೆ ರೂಪಿಸುತ್ತಿರುವದಾಗಿ ವಿವರಿಸಿದರು.
ಮೂಲ ಸೌಕರ್ಯ : ಭೂ ಸೇನಾ ನಿಗಮದಿಂದ ನಿರ್ಮಾಣಗೊಳ್ಳಲಿರುವ ವಸತಿ ಕಟ್ಟಡ ಕಾಮಗಾರಿ ವೇಳೆ ಮಕ್ಕಳಿಗೆ ಸ್ನಾನಗ್ರಹ ಸೇರಿದಂತೆ ವಸ್ತ್ರ ಬದಲಾಯಿಸಲು ಕೊಠಡಿ ಹಾಗೂ ಚಂಡಿ ಬಟ್ಟೆ ಒಣಗಿಸುವ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಕ್ಕೆ ಒತ್ತು ನೀಡುತ್ತಿರುವದಾಗಿ ಮಾಹಿತಿಯಿತ್ತರಲ್ಲದೆ, ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆಯಿಂದ ಕ್ರೀಡಾಂಗಣದಲ್ಲಿ ಪದೇ ಪದೇ ಗಿಡ ಗಂಟಿಗಳು ಬೆಳೆಯುತ್ತಲೇ ಇವೆ ಎಂದು ವಿಷಾದಿಸಿದರು. ಈ ನಿಟ್ಟಿನಲ್ಲಿ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಹೋಜನೆ ಕೈಗೊಳ್ಳಲಾಗುವದು ಎಂದು ಅಭಿಪ್ರಾಯಪಟ್ಟರು.
ತಡೆಗೋಡೆ ಎತ್ತರ : ವಸತಿ ನಿಲಯದ ಮಕ್ಕಳ ಸುರಕ್ಷತೆಗೆ ಭವಿಷ್ಯದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವದು ಎಂದು ಬೊಟ್ಟು ಮಾಡಿದ ಜಯಲಕ್ಷ್ಮೀ ಬಾಯಿ ಆ ಸಲುವಾಗಿ ಕ್ರೀಡಾಂಗಣದ ಆವರಣ ಗೋಡೆಯನ್ನು ಮತ್ತಷ್ಟು ಎತ್ತರಿಸಲು ಉದ್ದೇಶಿಸಲಾಗಿದೆ ಎಂಬದಾಗಿ ತಿಳಿಸಿದರು. ಅಲ್ಲದೆ ನೂತನ ವಿದ್ಯಾರ್ಥಿ ನಿಲಯವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ರಾಜ್ಯ ವಲಯದಿಂದ ನೇರವಾಗಿ ರೂ. 1 ಕೋಟಿ ಅನುದಾನದೊಂದಿಗೆ ಕಾಮಗಾರಿ ಕೈಗೊಳ್ಳಲಾಗುವದು ಎಂಬದಾಗಿ ವಿವರಣೆ ನೀಡಿದರು.
ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ
ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಯೋಗ ಚಟುವಟಿಕೆ ನಡೆಸುವ ಸಲುವಾಗಿ ಕಟ್ಟಡ ನಿರ್ಮಾಣಕ್ಕೆ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೂಮಿ ಪೂಜೆ ನೆರವೇರಿಸಿದರು. ಈ ಸುಂದರ್ಭ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಮಾಜೀ ನಗರಸಭಾ ಅಧ್ಯಕ್ಷ ಪೊನ್ನಪ ಪಿ., ಮಾಜಿ ನಗರಸಭಾ ಸದಸ್ಯ ಉಣ್ಣಿಕೃಷ್ಣ, ಭೂ ಸೇನಾ ನಿಗಮ ಅಧಿಕಾರಿಗಳು ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಜಯಲಕ್ಷ್ಮೀ ಬಾಯಿ ಮೊದಲಾದವರು ಹಾಜರಿದ್ದರು. ವಿಧಾನಪರಿಷತ್ ಸದಸ್ಯರ ಅನುದಾನದಿಂದ ರೂ. 26 ಲಕ್ಷ ವೆಚ್ಚದ ಈ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ.