ಮಡಿಕೇರಿ, ಅ. 16: ಕೊಡಗು ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಪ್ರವಾಸಿಗರನ್ನು ಸದಾ ಕೈ ಬೀಸಿ ಕರೆಯುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೊಡಗಿನ ಬಗ್ಗೆ ಸಮಗ್ರ ಮಾಹಿತಿ. ಕೊಡಗಿನ ಸದಾ ಕೈ ಬೀಸಿ ಕರೆಯುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೊಡಗಿನ ಬಗ್ಗೆ ಸಮಗ್ರ ಮಾಹಿತಿ. ಕೊಡಗಿನ ಆರಂಭವಾಗಿದೆ.ಕೊಡಗಿನ ಗಡಿ ಕುಶಾಲನಗರಕ್ಕೆ ಮೈಸೂರಿನ ಕಡೆಯಿಂದ ಆಗಮಿಸುತ್ತಿದ್ದಂತೆ ಕಾವೇರಿ ಪ್ರತಿಮೆ ಅನತಿ ದೂರದಲ್ಲಿ ಸ್ವಾಗತ ಕಮಾನು ಇದ್ದು, ಆ ಸ್ಥಳದಲ್ಲಿ ಕೊಡಗು ಜಿಲ್ಲೆಯ ಪರಂಪರೆ, ಇತಿಹಾಸ, ಪ್ರವಾಸಿ ಸ್ಥಳಗಳ ವಿವರಣೆ ಸೇರಿದಂತೆ ಜಿಲ್ಲೆಯ ಪೂರ್ಣ ಮಾಹಿತಿಗಳನ್ನು ಪ್ರವಾಸಿಗರಿಗೆ ನೀಡುವ ನಿಟ್ಟಿನಲ್ಲಿ ‘ಗೇಟ್ ವೇ ಆಫ್ (ಮೊದಲ ಪುಟದಿಂದ) ಕೊಡಗು’ ಹೆಸರಿನ ಕೇಂದ್ರವೊಂದನ್ನು ಸ್ಥಾಪಿಸಬೇಕೆಂದು ಹೊಟೇಲ್ ಅಸೋಸಿಯೇಷನ್ ಹಾಗೂ ಚೇಂಬರ್ ಆಫ್ ಕಾಮರ್ಸ್ ಹಲವಾರು ವರ್ಷಗಳ ಹಿಂದೆಯೆ ಸರಕಾರದ ಮಟ್ಟದಲ್ಲಿ ಪ್ರಸ್ತಾವನೆ ಕಳುಹಿಸಿತ್ತು. ಬಳಿಕ ಈ ಸಂಬಂಧ 2014ರಲ್ಲಿ ಕೊಡಗಿನ ಜಿಲ್ಲಾಧಿಕಾರಿಗಳಿಗೆ ‘ಗೇಟ್ ವೇ ಆಫ್ ಕೊಡಗು’ ಯೋಜನೆ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸರಕಾರ ಆದೇಶಿಸಿತ್ತು. ಜಿಲ್ಲಾಧಿಕಾರಿಗಳು ಈ ಕುರಿತು ಸಮಗ್ರ ವರದಿಗಾಗಿ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಸೂಚಿಸಿದ್ದರಾದರೂ ನಂತರದ ದಿನಗಳಲ್ಲಿ ಆ ಪ್ರಕ್ರಿಯೆ ಅಲ್ಲಿಗೇ ಸ್ಥಗಿತಗೊಂಡಿತ್ತು.
ಇದೀಗ ಕೆಲ ದಿನಗಳ ಹಿಂದೆ ಹೊಟೇಲ್ ಅಸೋಸಿಯೇಷನ್ ಹಾಗೂ ಚೇಂಬರ್ ಆಫ್ ಕಾಮರ್ಸ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಲೋಕೋಪಯೋಗಿ ಇಂಜಿನಿಯರ್ ಪೀಟರ್ ‘ಗೇಟ್ ವೇ ಆಫ್ ಕೊಡಗು’ ಯೋಜನೆಗೆ ನಿಗದಿಪಡಿಸಲಾದ ಸ್ಥಳವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಖಜಾಂಚಿ ಭಾಸ್ಕರ್, ವಕೀಲ ನಾಗೇಂದ್ರ ಬಾಬು ಇತರಿದ್ದರು.