ಕಡಂಗ, ಅ. 16: ಸತತ 40 ವರ್ಷಗಳಿಂದ ಅರಪಟ್ಟು ಕರಡ ಸಮಸ್ತ ಕೊಡವ ನಾಗರಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಕೈಲ್ ಪೋಳ್ದ್ ನಮ್ಮೆ ಕರಡ ಸರ್ಕಾರಿ ಶಾಲೆ ಮೈದಾನದಲ್ಲಿ ನಡಿಕೇರಿಯಂಡ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಬೇಪಡಿಯಂಡ ದಾದ ಅಯ್ಯಣ್ಣ ಉದ್ಘಾಟಿಸಿದರು. ಆ ಪ್ರಯುಕ್ತ ನಡೆದ ಕ್ರೀಡಾಕೂಟದ ಹಾಕಿ ಪಂದ್ಯಾಟದಲ್ಲಿ ಅರಪಟ್ಟು ತಂಡ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕರಡ ತಂಡ ಜಯಗಳಿಸಿತು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಹಾಗೂ ನ್ಯಾಷನಲ್ ಅಥ್ಲಿಟ್ ಪಟ್ರಪಂಡ ಸೋಮೇಶ್ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೇಪಡಿಯಂಡ ಶಾಂತಿ, ನಡಿಕೇರಿಯಂಡ ವಿಕ್ರಂ ಉತ್ತಪ್ಪ ಆಗಮಿಸಿದರು