ಕುಶಾಲನಗರ, ಅ. 16: ಕುಶಾಲನಗರ ಗೌಡ ಸಮಾಜದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೂರನ ಪ್ರಕಾಶ್ ಆಯ್ಕೆಗೊಂಡಿದ್ದಾರೆ. ಸಮಾಜದ ನಿರ್ಗಮಿತ ಅಧ್ಯಕ್ಷರಾದ ಕೇಚಪ್ಪನ ಮೋಹನ್ ಅಧ್ಯಕ್ಷತೆಯಲ್ಲಿ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು.

ನೂತನ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಪಟ್ಟಂದಿ ಬೀನಾ ಸೀತಾರಾಂ, ಕಾರ್ಯದರ್ಶಿಯಾಗಿ ಎಂ.ಕೆ. ಗಣೇಶ್, ಸಹ ಕಾರ್ಯದರ್ಶಿಯಾಗಿ ಸೆಟ್ಟೇಜನ ಗಣಪತಿ, ಖಜಾಂಚಿಯಾಗಿ ಕಡ್ಯದ ಅಶೋಕ್, ನಿರ್ದೇಶಕರುಗಳಾಗಿ ಗುಡ್ಡೆಮನೆ ವಿಶುಕುಮಾರ್, ಕುಲ್ಲಚೆಟ್ಟಿ ಪೂವಯ್ಯ, ಚೀಯಪ್ಪನ ಕುಶಾಲಪ್ಪ, ಚೀಯಂಡಿ ಶಾಂತಿ, ನಾಡೆಯನ ರೂಪಾ, ಹಾನಗಲ್ ರೂಪಾ, ಜೈನೀರ ಪದ್ಮನಾಭ, ಕೆದಂಬಾಡಿ ಮುಕುಂದ, ಸುಳ್ಯಕೋಡಿ ಮಾದಪ್ಪ ಆಯ್ಕೆಗೊಂಡಿದ್ದಾರೆ.