ಮರಗೋಡು, ಅ. 16: ಇಲ್ಲಿನ ಗ್ರಾಮ ಕೇಂದ್ರದಲ್ಲಿರುವ ವಿದ್ಯುತ್ ಕಂಬವೊಂದು ಕಳೆದ ಹಲವು ತಿಂಗಳಿನಿಂದ ಬೀಳುವ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ಈ ಕಂಬದ ಪಕ್ಕದಲ್ಲೆ ಹೊಸ ಕಂಬ ಹಾಕಿ ವರ್ಷ ಕಳೆದರೂ ವಿದ್ಯುತ್ ತಂತಿಗಳನ್ನು ಹೊಸ ಕಂಬಕ್ಕೆ ವರ್ಗಾಯಿಸದೆ ಚೆಸ್ಕಾಂ ತೀವ್ರ ನಿರ್ಲಕ್ಷ್ಯ ಮಾಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಹಳೆಯ ಕಂಬ ಅಲ್ಲಲ್ಲಿ ಬಿರುಕು ಬಿಟ್ಟು ತುಂಡಾಗುವ ಹಂತ ತಲಪಿದೆ. ಆದರೂ ಚೆಸ್ಕಾಂ ಸಿಬ್ಬಂದಿ ಲೋಪ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.