ಗೋಣಿಕೊಪ್ಪಲು, ಅ. 15: ಇತ್ತೀಚೆಗೆ ಲಯನ್ಸ್ ಸಂಸ್ಥೆ ಗೋಣಿಕೊಪ್ಪಲು, ಇವರು ನಡೆಸಿದ ಜಿಲ್ಲಾಮಟ್ಟದ ಸ್ವರಚಿತ ಕವನವಾಚನ ಸ್ಪರ್ಧೆಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯ ರಾದ ವಸುಂಧÀರ ಭಾರ್ಗವ್ (ದ್ವಿತೀಯ ಪಿ.ಯು.ಸಿ. ವಾಣಿಜ್ಯ) ಹಾಗೂ ರೀನ ಪಿ.ಆರ್ (ಪ್ರಥಮ ಪಿ.ಯು.ಸಿ. ವಿಜ್ಞಾನ) ಭಾಗವಹಿಸಿದ್ದು, ವಸುಂಧÀರ ಭಾರ್ಗವ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಉಪನ್ಯಾಸಕರಾದ ಎಂ.ಕೆ. ಪದ್ಮ ಹಾಗೂ ಎಂ.ಬಿ. ಪೂವಮ್ಮ ಮಾರ್ಗದರ್ಶನ ನೀಡಿರುವದಾಗಿ ಪ್ರಕಟಣೆ ತಿಳಿಸಿದೆ.