ಮಡಿಕೇರಿ, ಅ.14: ಕೂರ್ಗ್ ಟೇಬಲ್ ಟೆನ್ನಿಸ್ ಅಸೋಷಿಯೇಷನ್ ಮತ್ತು ರೋಟರಿ ಕ್ಲಬ್ ವತಿಯಿಂದ ತಾ. 18, 19 ಹಾಗೂ 20 ರಂದು ಜಿಲ್ಲಾಮಟ್ಟದ ಟೇಬಲ್‍ಟೆನ್ನಿಸ್ ಪಂದ್ಯಾವಳಿಯು ಸ್ಥಳೀಯ ರೋಟರಿ ಕ್ಲಬ್ ಒಳಾಂಗಣದಲ್ಲಿ ನಡೆಯಲಿದೆ.
ತಾ. 18 ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ತಾ. 20 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸಲು ಇಚ್ಚಿಸುವವರು ರಚನ ಪೊನ್ನಪ್ಪ 9980000438, 9110677030 ಮತ್ತು ಮೊಹಮ್ಮದ್ ಆಸೀಪ್-9845606784 ಇವರನ್ನು ಸಂಪರ್ಕಿಸಬಹುದು.