ಪೊನ್ನಂಪೇಟೆ, ಅ. 14: ರಂಗಭೂಮಿ ಪ್ರತಿಷ್ಠಾನ ಕೊಡಗು ಸಂಸ್ಥೆ, ಪ್ರತಿ ವರ್ಷ ನಡೆಸುತ್ತಾ ಬರುತ್ತಿರುವ ವಾರ್ಷಿಕ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ನಿವೃತ್ತ ಯೋಧರಿಗಾಗಿ ನಿರೂಪಿಸಲಾಗಿದೆ. ಸೈನ್ಯದ ಬೇರೆ ಬೇರೆ ವಿಭಾಗದಲ್ಲಿ ದುಡಿದ ಪೊನ್ನಂಪೇಟೆಯ ನಿವೃತ್ತ 18 ಯೋಧರನ್ನು ವಿಶೇಷವಾಗಿ ಗೌರವಿಸುವ ಕಾರ್ಯಕ್ರಮ ಇದಾಗಿದ್ದು, ‘ಯೋಧ ಮಿಲನ ಗೌರವ’ ಎಂದು ಹೆಸರಿಸಲಾಗಿದೆ.
ಪೊನ್ನಂಪೇಟೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಮಂದಣ್ಣ ಅಧ್ಯಕ್ಷತೆ ವಹಿಸಲಿದ್ದು, ಅನೇಕ ಯುವಕರಿಗೆ ಸೈನ್ಯ ಸೇರಲು ಪ್ರೇರಣೆ ನೀಡಿರುವ ಲೆಫ್ಟಿನೆಂಟ್ ಕರ್ನಲ್ ಮಾಚಂಗಡ ಕರುಂಬಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶೌರ್ಯ ಪ್ರಶಸ್ತಿ ಪುರಸ್ಕøತ ಯೋಧ ಹೆಚ್.ಎನ್. ಮಹೇಶ್ ಯೋಧ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಂಗಭೂಮಿ ಪ್ರತಿಷ್ಠಾನದ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಉಪಸ್ಥಿತರಿರುತ್ತಾರೆ.
ತಾ. 19 ರಂದು ಮಧ್ಯಾಹ್ನ 3.30 ಗಂಟೆಗೆ ಪೊನ್ನಂಪೇಟೆಯ ರಂಗಭೂಮಿ ವಠಾರದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಲಾವಿದÀರಿಂದ ‘ದೇಶಭಕ್ತಿ ಗೀತೆ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕಿ ಅನಿತಾ ಕಾರ್ಯಪ್ಪ ಪತ್ರಿಕಾ ಮಾಹಿತಿ ನೀಡಿದ್ದಾರೆ.