ಗುಡ್ಡೆಹೊಸೂರು, ಅ. 14: ಕೊಡಗು ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಅವರನ್ನು ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಸಮುದಾಯಭ ವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮೈಸೂರು ಜಿಲ್ಲಾ ಛಾಯಾ ಸ್ನೇಹ ಸೌಹಾದರ್À ನೂತನ ಸಹಕಾರಿ ಸಂಘದ ಉಧ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ. ಸೋಮಶೇಖರ್ ಉಪಸ್ಥಿತರಿದ್ದರು.

ವಿಶು ಕುಮಾರ್ ಅವರು ಕಳೆದ ಬಾರಿ ಬೆಂಗಳೂರಿನಲ್ಲಿ ಕರ್ನಾಟಕ ಛಾಯಾಗ್ರಾಹಕ ಸಂಘದ ವತಿಯಿಂದ ‘ಛಾಯಾ ಸಾಧಕ ಪ್ರಶಸ್ತಿ’ಯನ್ನು ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕ ಸೋಮಶೇಖರ್ ಮಾತನಾಡಿ, ಛಾಯಾಗ್ರಹಣ ಅದ್ಭುತ ಕಲೆ ಎಂದು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸಹಕಾರಿ ದುರೀಣ ಹೆಚ್.ವಿ. ರಾಜೀವ್, ಸಂಘದ ನೋಂದಣಿ ದೃಢೀಕರಣ ಪತ್ರ ಬಿಡುಗಡೆ ಗೊಳಿಸಿದರು.

ಸಂಘದ ಅಧ್ಯಕ್ಷ ಎಂ.ಎಸ್. ರಾಜೇಂದ್ರಕುಮಾರ್, ಉಪಾಧ್ಯಕ್ಷ ಸಿ. ಅಭಿನಂದನ್, ರಾಜ್ಯ ಸೌಹಾದರ್À ಸಂಯುಕ್ತ ಸಂಘದ ಅಧ್ಯಕ್ಷ ಬಿ.ಎಚ್. ಕೃಷ್ಣರೆಡ್ಡಿ, ಎಂ.ಎಸ್. ಮಂಜುನಾಥ್, ಪಾಲಿಕೆ ಸದಸ್ಯ ಆಫ್ತಾಬ್ ಮತ್ತಿತರರು ಹಾಜರಿದ್ದರು.