ಕುಶಾಲನಗರ, ಅ. 14: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿಯ 46ನೇ ವರ್ಷದ ವಾರ್ಷಿಕ ಮಹಾಸಭೆ ನಡೆಯಿತು. ಸಮಿತಿಯ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2018 ರ ಮಹಾಸಭೆಯ ವರದಿ ಮತ್ತು ಜಮಾ ಖರ್ಚು, ಆಯವ್ಯಯ, ಆಸ್ತಿ, ಜವಾಬ್ದಾರಿ ತಖ್ತೆಗಳನ್ನು ಅಂಗೀಕರಿಸಲಾಯಿತು.

2019 ರಲ್ಲಿ ನಡೆಯುವ ಗಣಪತಿ ಜಾತ್ರೋತ್ಸವ ಮತ್ತು ಜಾನುವಾರು ಜಾತ್ರೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಈ ಬಾರಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಲು ಎಲ್ಲರ ಸಹಕಾರ ಕೋರಲಾಯಿತು. ನವೆಂಬರ್ 16 ರಂದು ಶ್ರೀ ಗಣಪತಿ ದೇವಾಲಯದ ಜಾತ್ರಾ ಮಹೋತ್ಸವ ಜರುಗಲಿದ್ದು ಈ ನಿಟ್ಟಿನಲ್ಲಿ ಪೂರ್ವಭಾವಿ ಸಿದ್ದತಾ ಕಾರ್ಯ ನಡೆಸಲು ಸಭೆ ಒಮ್ಮತದ ಅಭಿಪ್ರಾಯ ನೀಡಿತು.

ಸಭೆಯಲ್ಲಿ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ ರಾವ್, ಖಜಾಂಚಿ ಎಂ.ಕೆ.ದಿನೇಶ್, ಸಹಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕರುಗಳಾದ ಎಸ್.ಎನ್. ನರಸಿಂಹಮೂರ್ತಿ, ಜಿ.ಎಲ್. ನಾಗರಾಜ್, ವಿ.ಪಿ.ಶಶಿಧರ್, ಎಂ.ವಿ.ನಾರಾಯಣ, ಖಾಯಂ ಆಹ್ವಾನಿತರಾದ ಟಿ.ಆರ್.ಶರವಣಕುಮಾರ್, ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರಬಾಬು ಮತ್ತು ವಿಶೇಷ ಆಹ್ವಾನಿತರು, ಸದಸ್ಯರುಗಳು ಪಾಲ್ಗೊಂಡಿದ್ದರು.