ಮಡಿಕೇರಿ, ಅ.12: ಮಡಿಕೇರಿಯಿಂದ ಸುಮಾರು 500 ಕಿ.ಮೀ. ಅಂತರ ಕ್ರಮಿಸುವ ಸೈಕಲ್ ಜಾಥಾಕ್ಕೆ ಇಂದು ಚಾಲನೆ ನೀಡಲಾಯಿತು. ಸಂಪಿಗೆ ಕಟ್ಟೆಯ ವೃಂದಾವನ್ ಕೂರ್ಗ್ ರೆಸಾರ್ಟ್ ಆವರಣದಲ್ಲಿ ಐ ಸೈಕಲ್ ಸೊಲ್ಯೂಷನ್ಸ್ ಮತ್ತು ಗ್ರೀನ್ ಸಿಟಿ ಫೋರಮ್ ವತಿಯಿಂದ 10 ನೇ ವರ್ಷದ ಗ್ರೇಟ್ ಮಲ್ನಾಡ್ ಚಾಲೆಂಜ್ ಸೈಕ್ಲಿಂಗ್ ಜಾಥಾ ಉದ್ಘಾಟನೆಗೊಂಡಿತು. ಡಿ.ವೈ.ಎಸ್.ಪಿ ದಿನೇಶ್‍ಕುಮಾರ್, ನಗರಸಭಾ ಆಯುಕ್ತ ಎಮ್.ಎಲ್ ರಮೇಶ್, ಗ್ರೀನ್ ಸಿಟಿ ಫೋರಮ್ ಅಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಮಡಿಕೇರಿ, ಅ.12: ಮಡಿಕೇರಿಯಿಂದ ಸುಮಾರು 500 ಕಿ.ಮೀ. ಅಂತರ ಕ್ರಮಿಸುವ ಸೈಕಲ್ ಜಾಥಾಕ್ಕೆ ಇಂದು ಚಾಲನೆ ನೀಡಲಾಯಿತು. ಸಂಪಿಗೆ ಕಟ್ಟೆಯ ವೃಂದಾವನ್ ಕೂರ್ಗ್ ರೆಸಾರ್ಟ್ ಆವರಣದಲ್ಲಿ ಐ ಸೈಕಲ್ ಸೊಲ್ಯೂಷನ್ಸ್ ಮತ್ತು ಗ್ರೀನ್ ಸಿಟಿ ಫೋರಮ್ ವತಿಯಿಂದ 10 ನೇ ವರ್ಷದ ಗ್ರೇಟ್ ಮಲ್ನಾಡ್ ಚಾಲೆಂಜ್ ಸೈಕ್ಲಿಂಗ್ ಜಾಥಾ ಉದ್ಘಾಟನೆಗೊಂಡಿತು. ಡಿ.ವೈ.ಎಸ್.ಪಿ ದಿನೇಶ್‍ಕುಮಾರ್, ನಗರಸಭಾ ಆಯುಕ್ತ ಎಮ್.ಎಲ್ ರಮೇಶ್, ಗ್ರೀನ್ ಸಿಟಿ ಫೋರಮ್ ಅಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಕಿ.ಮೀ ಕ್ರಮಿಸಿ ಕುಂದಾಪುರದಲ್ಲಿ ತಾ.18 ರಂದು ಸಮಾರೋಪ ಗೊಳ್ಳಲಿದೆ. ಮಾರ್ಗದ ಉದ್ದಕ್ಕೂ ಸುಮಾರು 10-12 ಕಿ.ಮೀ ದೂರದ ರೇಸ್‍ಗಳನ್ನು ನಡೆಸಲಾಗುತ್ತದೆ ಎಂದು ಐ ಸೈಕಲ್‍ನ ಪ್ರಮುಖರು ತಿಳಿಸಿದರು. ರೂ.30,000 ದಿಂದ ಹಿಡಿದು ಸುಮಾರು 7 ಲಕ್ಷದಷ್ಟು ಬೆಲೆ ಬಾಳುವ ದುಬಾರಿ ಸೈಕಲ್‍ಗÀಳು ಜಾಥಾದಲ್ಲಿ ಬಳಸಲಾಗಿತ್ತು. ಭಾರತದ ಎಮ್.ಟಿ.ಬಿ ಸೈಕ್ಲಿಂಗ್ ಚಾಂಪಿಯನ್ ಕಿರಣ್‍ಕುಮಾರ್ ಕೂಡ ಭಾಗವಹಿಸಿದ್ದರು. ಅವರ ಸೈಕಲ್ ರೂ. 7 ಲಕ್ಷ ಮೌಲ್ಯದ್ದು ಎನ್ನುವದು ವಿಶೇಷ.

(ಮೊದಲ ಪುಟದಿಂದ) ಮಾತು ಬಾರದಿದ್ದರೂ, ಶ್ರವಣ ದೋಷವಿದ್ದರೂ ಜಾಥಾದಲ್ಲಿ ಪಾಲ್ಗೊಂಡ 18 ವರ್ಷದ ಯುವಕ ಮಣಿಕಂಡನ್ ತಮ್ಮ ಸಾಹಸವನ್ನು ತೋರುವ ಮೂಲಕ ಎಲ್ಲರಿಗೆ ಮಾದರಿಯಾದರು. ದಿನೇಶ್ ಕುಮಾರ್, ಎಮ್.ಎಲ್ ರಮೇಶ್ ಹಾಗೂ ಜಯಾ ಚಿಣ್ಣಪ್ಪ ಮಾತನಾಡಿ ಜಾಥಾದಲ್ಲಿ ಪಾಲ್ಗೊಂಡ ಎಲ್ಲರನ್ನು ಪ್ರಶಂಶಿಸಿ, ಆರೋಗ್ಯ ಹಾಗೂ ಪ್ರಕೃತಿ ದೃಷ್ಟಿಯಲ್ಲಿ ಸೈಕ್ಲಿಂಗ್ ಒಂದು ಒಳ್ಳೆಯ ಅಭ್ಯಾಸ ಎಂಬ ಸಂದೇಶ ನೀಡಿ ಹಾರೈಸಿದರು. ಸೈಕ್ಲಿಂಗ್ ಗುಂಪನ್ನು ಮಣಿಕಂಡನ್ ಮುನ್ನಡೆಸಿದರು.