ಮಡಿಕೇರಿ, ಅ.12: ದಂತಚೋರ, ಕಾಡುಗಳ್ಳ ವೀರಪ್ಪನ್ ಮಟ್ಟಹಾಕುವಲ್ಲಿ ಶ್ರಮಿಸಿದ ಕೊಡಗು ಜಿಲ್ಲೆಯ ವೀರ ಪೆÇಲೀಸರಿಗೆ ಸೂಕ್ತ ಗೌರವ ದೊರಕಲಿಲ್ಲ ಎಂದು ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಮತ್ತು ದಂತಚೋರನ ಬೆನ್ನಟ್ಟಿ ಕೃತಿಯ ಕರ್ತ ಡಾ.ಡಿ.ವಿ.ಗುರುಪ್ರಸಾದ್ ವಿಷಾದಿಸಿದರು.ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ನಿವೃತ್ತ ಪೆÇಲೀಸ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಡಿ.ವಿ. ಗುರುಪ್ರಸಾದ್, ದಂಚಚೋರ ವೀರಪ್ಪನ್‍ನನ್ನು ಮೊದಲು ಸೆರೆ ಹಿಡಿದ ಖ್ಯಾತಿ ಕೊಡಗಿನವರಾದ ಕೂಡಕಂಡಿ ಸೋಮಣ್ಣ ಅವರಿಗೆ ಸಲ್ಲಬೇಕು. ಸೋಮಣ್ಣ ಎಂಬ ಹೆಸರು ಕೇಳಿದೊಡನೇ ವೀರಪ್ಪನ್ ಹೆದರಿ ನಡುಗುತ್ತಿದ್ದ. ಎರಡನೇ ಬಾರಿಯೂ ವೀರಪ್ಪನ್‍ನನ್ನು ಚಂಗಪ್ಪ ಎಂಬ ಕೊಡಗಿನ ಪೆÇಲೀಸ್ ಅಧಿಕಾರಿ ಸೆರೆ ಹಿಡಿದರು. ವೀರಪ್ಪನ್‍ನೊಂದಿಗೆ ಪೆÇಲೀಸ್ ಕಾರ್ಯಾಚರಣೆ ಸಂದರ್ಭ ಮೊದಲು ಮುಖಾಮುಖಿಯಾದ ಪೆÇಲೀಸ್ ಈರಪ್ಪ ಕೂಡ ಕೊಡಗಿನವರೇ ಎಂದು ಸ್ಮರಿಸಿಕೊಂಡರು. ಹಾಗೇ ಕೊಡಗಿನವರೇ ಆದ ಮಂದಪ್ಪ ಎಂಬ ಪೆÇಲೀಸ್ ಅಧಿಕಾರಿಯೂ ವೀರಪ್ಪನ್ ಸೆರೆ ಕಾರ್ಯಾಚರಣೆ ಸಂದರ್ಭ ಶೂರತ್ವ ಪ್ರದರ್ಶಿಸಿದ್ದರು ಎಂದೂ ಗುರುಪ್ರಸಾದ್ ಶ್ಲಾಘಿಸಿದರು.

ವೀರಪ್ಪನ್ ಅಂತ್ಯಕ್ಕೆ ಕರ್ನಾಟಕದ ಪೆÇಲೀಸರು ಹಲವಾರು ವರ್ಷಗಳೂ ಸಾಕಷ್ಟು ಪರಿಶ್ರಮಪಟ್ಟರೂ ಕೊನೆಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿಲ್ಲ. ಅದರಲ್ಲಿಯೂ ಕೊಡಗಿನ ಪೆÇಲೀಸರು ತಮ್ಮ ಶೂರತೆಯಿಂದ ವೀರಪ್ಪನ್ ತಂಡವನ್ನು ಬಗ್ಗುಬಡಿಯುವಲ್ಲಿ ಸಾಕಷ್ಟು ಶ್ರಮ ಹಾಕಿದರೂ ಅವರಿಗೆ ಕೊನೆಗೂ ಹಣ. ಮನೆಯಂಥ ಯಾವದೇ ಪ್ರತಿಫಲ ದೊರಕದೇ ಇರುವದು ವಿಷಾದನೀಯ ಎಂದು ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.

ಕೊಡಗಿನ ಪೆÇಲೀಸರಿಗೆ ಸಮಯಪ್ರಜ್ಞೆ ಬಹಳವಿದೆ. ಅಂತೆಯೇ ಉಡುಗೆ, ಸಮವಸ್ತ್ರದಲ್ಲಿಯೂ ಕೊಡಗಿನ ಪೆÇಲೀಸರು ಸದಾ ಅಚ್ಚುಕಟ್ಟು ಎಂದೂ ನಿವೃತ್ತ ಪೆÇಲೀಸ್ ಮಹಾನಿರೀಕ್ಷಕರು ಶ್ಲಾಘಿಸಿದರು.

ಕೊಡಗಿನಲ್ಲಿ ತಾನು ಪೆÇಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ದಿನಗಳನ್ನು ಸ್ಮರಿಸಿಕೊಂಡ ಗುರುಪ್ರಸಾದ್, ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಅಭಿವೃದ್ಧಿಗಾಗಿ ರೂ.10 ಲಕ್ಷ ಕೊಡಗಿನ ದಾನಿಗಳ ನೆರವಿನಿಂದ ಸಂಗ್ರಹಿಸಿದ್ದೆ. ಆಗ ಜನರಲ್ ಕಾರ್ಯಪ್ಪ ಕೂಡ ತನ್ನೊಂದಿಗೆ ಸಹಕರಿಸಿದ್ದರು ಎಂದು ಹೆಮ್ಮೆಯಿಂದ ನುಡಿದರು. ಹಾಗೇ ಆರ್. ಗುಂಡೂರಾವ್ ಚುನಾವಣೆಗೆ ನಿಂತ ಸಂದರ್ಭ ನೀವು ಸೋಲುತ್ತೀರಿ. ಬೇರೆ ಕಡೆ ಸ್ಪರ್ಧಿಸಿ, ಸೋಮವಾರಪೇಟೆಯಲ್ಲಿ ಗೆಲುವಿನ ಸೂಕ್ತ ವಾತಾವರಣ ಇಲ್ಲ ಎಂದು ಪೆÇಲೀಸ್ ಇಲಾಖೆಯ ಆಂತರಿಕ ವಿಭಾಗದ ಅಧಿಕಾರಿಯಾಗಿ ಹೇಳಿದ್ದೆ. ನನ್ನ ಮಾತು ಕೇಳದೆ ಗುಂಡೂರಾವ್ ಸೋಮವಾರಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡರು. ರಾಜಕೀಯ ವಾಗಿಯೂ ರಾಯರ ಖ್ಯಾತಿ ಇಳಿಮುಖವಾಯಿತು ಎಂದು ಗುರುಪ್ರಸಾದ್ ನೆನಪಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಣ್ಣೇಕರ್, ನಿವೃತ್ತರಾದ ಬಳಿಕವೂ ಪೆÇಲೀಸರು ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯದತ್ತ ಗಮನ ನೀಡಬೇಕು. ನಿವೃತ್ತ ಪೆÇಲೀಸರು ಮತ್ತು ಕುಟುಂಬವರ್ಗ ತಮಗಾಗಿ ಇರುವ ಆರೋಗ್ಯ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು. 800 ಸದಸ್ಯರಿರುವ ಸಂಘದಲ್ಲಿ ಕೇವಲ 200 ಸದಸ್ಯರು ಮಾತ್ರ ಆರೋಗ್ಯ ಯೋಜನೆಗೆ ನೋಂದಣಿಯಾಗಿರುವ ಬಗ್ಗೆಯೂ ಪೆÇಲೀಸ್ ವರಿಷ್ಠಾಧಿಕಾರಿ ಅಚ್ಚರಿ ವ್ಯಕ್ತಪಡಿಸಿದರು. ನಿವೃತ್ತ ಪೆÇಲೀಸ್

(ಮೊದಲ ಪುಟದಿಂದ) ಅಧಿಕಾರಿಗಳು ತಮ್ಮ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಸಂಘದ ನೂತನ ಅಧ್ಯಕ್ಷ ಅರಮಣಮಾಡ ಕೆ.ಸುರೇಶ್, ಕಾರ್ಯದರ್ಶಿ ಅಚ್ಯುತ ನಾಯರ್, ಉಪಾಧ್ಯಕ್ಷ ಬಿ.ಆರ್. ಲಿಂಗಪ್ಪ, ನಿರ್ಗಮಿತ ಅಧ್ಯಕ್ಷ ಎಂ.ಎ. ಅಪ್ಪಯ್ಯ, ಸಲಹೆಗಾರ ಬಿ.ಎ. ಪೂಣಚ್ಚ,. ಪರಮಶಿವ, ಕುಮಾರಸ್ವಾಮಿ, ಪಣ್ಣೇಕರ್ ವೇದಿಕೆಯಲ್ಲಿ ಹಾಜರಿದ್ದರು. ಇದೇ ಸಂದರ್ಭ ಡಾ.ಡಿ.ವಿ. ಗುರುಪ್ರಸಾದ್ ವಿರಚಿತ 50 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿರುವ ದಾಖಲೆಯ ವೀರಪ್ಪನ್ - ದಂಚಚೋರನ ಬೆನ್ನಟ್ಟಿ ಕೃತಿಯನ್ನು ಕೊಡಗಿನಲ್ಲಿಯೂ ಬಿಡುಗಡೆ ಮಾಡಲಾಯಿತು. ಅಂತೆಯೇ ವಿಜ್ಞಾನ ಪಠ್ಯ ವಿಷಯದಲ್ಲಿ ಅತ್ಯಧಿಕ ಅಂಕಗಳಿಸಿದ ಪೆÇಲೀಸ್ ಕುಟುಂಬದ ಕುಶಾಲನಗರದ ಸೌಜನ್ಯ ಹಾಗೂ ಮಡಿಕೇರಿಯ ಕೃಪಾ ಅವರಿಗೆ ಬಹುಮಾನ ನೀಡಲಾಯಿತು.

-ಅನಿಲ್ ಹೆಚ್.ಟಿ.