ಮಡಿಕೇರಿ, ಅ. 12: ಕರ್ನಾಟಕ ಸರ್ಕಾರದ ವತಿಯಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 2019-20ನೇ ಸಾಲಿನ ಮಕ್ಕಳ ದಸರಾ ಕ್ರೀಡಾಕೂಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಕೊಡಗಿನ ಮರ್ಕರ ಟೆಕ್ವಾಂಡೊ ಕ್ಲಬ್‍ನ ವಿದ್ಯಾರ್ಥಿಗಳು ಆರು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಚೇತನಾಶ್ರೀ, ಎಂ.ಆರ್. ಲಿಪಿಕಾ, ಎಂ.ಆರ್. ಮೃದುಲ್, ಪಿ.ಜಿ. ನಿಖೇಶ್, ಯು.ಡಿ. ಮೋನಿಷ್, ಸಾನಿಶ್ ತಿಮ್ಮಯ್ಯ ಚಿನ್ನದ ಪದಕ, ಮನಸ್ವಿ ಹಾಗೂ ಚಾರ್ವಿ ಸುಬ್ಬಯ್ಯ ಬೆಳ್ಳಿ ಪದಕ ಮತ್ತು ಬಿ.ವಿ. ವೈಷ್ಣವಿ ಕಂಚಿನ ಪದಕ ಗೆದ್ದುಕೊಂಡರು.

ಇವರುಗಳು ನವೆಂಬರ್‍ನಲ್ಲಿ ನಡೆಯಲಿರುವ ಸ್ಟೇಟ್ ಒಲಂಪಿಕ್ ಚೀಫ್ ಮಿನಿಸ್ಟರ್ ಕಪ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಮರ್ಕರ ಟೆಕ್ವಾಂಡೊ ಕ್ಲಬ್‍ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.