ವೀರಾಜಪೇಟೆ, ಅ. 12: ಕೊಡವರು ಎಲ್ಲೇ ಇದ್ದರೂ ಕೊಡಗಿನಲ್ಲಿರುವ ಜಾಗವನ್ನು ಮಾರಾಟ ಮಾಡದೆ ಉಳಿಸಿಕೊಳ್ಳಿ. ಮತದಾರರ ಗುರುತಿನ ಚೀಟಿ ಇಲ್ಲಿಯೇ ಮಾಡಿಸಿಕೊಳ್ಳಿ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ ಹೇಳಿದರು.ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಕೊಡವ ನಮ್ಮೆಯ ಎರಡನೇ ದಿನ ಯೋಧರ ಯುದ್ಧ ಸ್ಮಾರಕ ಸ್ಥಂಭಕ್ಕೆ ಗೌರವ ಸಮರ್ಪಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ; ಕೊಡಗಿನಲ್ಲಿರುವ ಜಾಗವನ್ನು ಮಾರಾಟ ಅಥವಾ ಭೋಗ್ಯಕ್ಕೆ ಕೊಡಬೇಡಿ. ಭೋಗ್ಯಕ್ಕೆ ನೀಡಿದರೆ ತೋಟದಲ್ಲಿರುವ ಮರಗಳನ್ನು ಕಡಿದು ಮಾರಾಟ ಮಾಡುತ್ತಾರೆ. ಪರಿಸರ ನಾಶವಾಗುತ್ತದೆ ಎಂದರು.ಬಹಳ ಜನರಿಗೆ ಯುದ್ಧ ಸ್ಮಾರಕ ಎಂದರೆ ಏನು ಎಂಬ ಜಿಜ್ಞಾಸೆ ಇದೆ. ದೇಶ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಶತ್ರುಗಳ ಗುಂಡಿಗೆ ಬಲಿಯಾದ ಹುತಾತ್ಮರಿಗೆ ಗೌರವ ಸಲ್ಲಿಸಲು ಒಂದು ಸ್ಮಾರಕ. ಯುದ್ಧ ಭೂಮಿಯನ್ನು ವರ್ಣಿಸಲು ಸಾಧ್ಯವಿಲ್ಲ. ಧೈರ್ಯ ಎದೆಗಾರಿಕೆ ಇದ್ದರೆ ಬದುಕಿ ಬರಲು ಸಾಧ್ಯ ಎಂದರು.ಕೊಡಗಿನಲ್ಲಿ ಆಗುವ ಕಾರ್ಯಕ್ರಮಗಳಿಗೆ ಮಾಧÀ್ಯಮಗಳು ಉತ್ತಮ ಪ್ರಚಾರ ನೀಡುತ್ತಿವೆ. ಜಿಲ್ಲೆಯ ಹೊರ ಭಾಗದಲ್ಲಿ ನಡೆಯುವ ಕೊಡವ ಕಾರ್ಯಕ್ರವiಗಳನ್ನು ಅಲ್ಲಿನ ಎಫ್.ಎಂ ರೇಡಿಯೋಗಳೊಂದಿಗೆ ಸಂಯೋಜನೆ ಮಾಡಿಕೊಳ್ಳುವದು ಉತ್ತಮ. ವೀಡಿಯೋ ಚಿತ್ರೀಕರಿಸಿ ದೃಶ್ಯ ಮಾಧÀ್ಯಮಗಳಿಗೆ ನೀಡಿದರೆ ಭಾಷೆ ಹಾಗೂ ಸಂಸ್ಕøತಿಯನ್ನು ಉಳಿಸಿ ಬೆಳೆಸಬಹುದು ಎಂದರು.

ಬೇರೆ ದೇಶಗಳಲ್ಲಿ ಕೊಡಗು ಎಂದರೆ ಗೊತ್ತೆ ಇಲ್ಲ. (ಮೊದಲ ಪುಟದಿಂದ) ಇಲ್ಲಿರುವ ಉತ್ತಮವಾದ ರೆಸಾರ್ಟ್‍ಗಳಿಂದ ಜಿಲ್ಲೆಯನ್ನು ಗುರುತಿಸುತ್ತಿದ್ದಾರೆ. ಅರಣ್ಯದಲ್ಲಿ ತೇಗದ ಮರಗಳನ್ನು ನೆಟ್ಟು ಇಲಾಖೆ ಹಣ ಮಾಡಿಕೊಳ್ಳುತ್ತಿದೆ. ಅದರ ಬದಲು ಕಾಡು ಬಿದಿರು, ಹಲಸಿನ ಮರಗಳನ್ನು ನೆಟ್ಟರೆ ಕಾಡು ಪ್ರಾಣಿಗಳಿಗೆ ಆಹಾರ ಸಿಗುತ್ತದೆ. ಪರಿಸರ ಉಳಿಯುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಸಚಿವ ಮೇರಿಯಂಡ ನಾಣಯ್ಯ, ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಕುಪ್ಪಂಡ ವೀಣಾ ನಂಜಪ್ಪ, ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಉಪಸ್ಥಿತರಿದ್ದರು.

ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿದರು. ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.