ಮಡಿಕೇರಿ, ಅ. 12: ಮಡಿಕೇರಿ ನಗರದಲ್ಲಿ ಬೆಳಕಿಗೆ ಬಂದ ರೂ. 2 ಸಾವಿರ ಮುಖ ಬೆಲೆಯ ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸು ತನಿಖೆ ಮುಂದುವರಿಯುತ್ತಿದೆ. ತಾ.10ರಂದು ಈ ಪ್ರಕರಣ ಪತ್ತೆಯಾಗಿದ್ದು, ನಗರ ಠಾಣಾ ಪೊಲೀಸರು ಕುಂಜಿಲದ ಅಮೀರ್ ಸೊಹೈಲ್ ಹಾಗೂ ಬೇತ್ರಿ ನಾಲ್ಕೇರಿಯ ಯೂನಿಸ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇದೊಂದು ವ್ಯವಸ್ಥಿತ ಜಾರಿ ಎಂಬ ಶಂಕೆವಿದ್ದು, ಪೊಲೀಸರು ಕ್ಷಿಪ್ರ ತನಿಖೆ ಮುಂದುವರಿಸುತ್ತಿರುವದು ತಿಳಿದು ಬಂದಿದೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಇನ್ನೂ ಹಲವಷ್ಟು ಮಂದಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಮುಖ್ಯ ಆರೋಪಿಯೋರ್ವನಿಗೆ ಬಲೆ ಬೀಸಲಾಗಿದೆ ಎನ್ನಲಾಗಿದೆ. ಕೇರಳ ಮೂಲದಿಂದ ಕೊಡಗಿನಲ್ಲಿ ಈ ಕೃತ್ಯ ನಡೆಸುತ್ತಿರುವ ಕುರಿತೂ ಹೇಳಲಾಗಿದೆ.