ವೀರಾಜಪೇಟೆ, ಅ. 13: ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಕೊಡವ ನಮ್ಮೆಯ ಅಂಗವಾಗಿ ಕೊಡವ ಸಮಾಜಗಳ ನಡುವೆ ಆಯೋಜಿಸಲಾಗಿದ್ದ ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ ಕೊಡವ ಸಮಾಜ 5-2 ಗೋಲುಗಳಿಂದ ನಾಪೋಕ್ಲು ಕೊಡವ ಸಮಾಜವನ್ನು ಪರಾಭವಗೊಳಿಸಿ 30ಸಾವಿರ ನಗದು ಹಾಗೂ ಪಾರಿತೋಷಕವನ್ನು ಪಡೆದುಕೊಂಡಿತು. ರನ್ನರ್ಸ್ ಸ್ಥಾನ ಪಡೆದ ನಾಪೋಕ್ಲು ತಂಡಕ್ಕೆ 20 ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಯಿತು. ಸೆಮಿಫೈನಲ್ಸ್‍ನಲ್ಲಿ ಸೋತ ತಂಡಕ್ಕೆ ತಲಾ 10 ಸಾವಿರ ನಗದು ನೀಡಿದರು.ಭಾರತ ತಂಡವನ್ನು ಪ್ರತಿನಿಧಿಸಿದ ಬಹುತೇಕ ಆಟಗಾರರನ್ನು ಒಳಗೊಂಡ ವೀರಾಜಪೇಟೆ ತಂಡ ಆರಂಭದಿಂದಲೇ ಸಂಘಟಿತ ಹೋರಾಟಕ್ಕೆ ಒತ್ತು ನೀಡಿತು. 10ಹಾಗೂ 18 ನಿಮಿಷದಲ್ಲಿ ಐಓಬಿ ಆಟಗಾರ ಮಾಲೇಟಿರ ಮುದ್ದಪ್ಪ ಗೋಲು ದಾಖಲಿಸಿದರು. 29 ನೇ ನಿಮಿಷದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಕರಿನೆರವಂಡ ಸೋಮಣ್ಣ ಮತ್ತೊಂದು ಗೋಲು ಬಾರಿಸಿದರು. ದ್ವಿತೀಯಾರ್ಧದ 34 ನೇ ನಿಮಿಷದಲ್ಲಿ ನಾಪೋಕ್ಲು ತಂಡದ ಇಎಂಇ ಆಟಗಾರ ಪಳಗಂಡ ಪೊನ್ನಪ್ಪ ಗೋಲು ಬಾರಿಸಿ ಗೋಲಿನ ಅಂತರವನ್ನು ಕುಗ್ಗಿಸಿದರು. 38 ಹಾಗೂ 57 ನಿಮಿಷದದಲ್ಲಿ ಸೆಂಟ್ರಲ್ ಎಕ್ಸೈಸ್ ಆಟಗಾರ ಪುಲಿಯಂಡ ತಿಮ್ಮಣ್ಣ ಗೋಲು ಬಾರಿಸುವದರ ಮೂಲಕ ಗೆಲವಿಗೆ ಕಾರಣರಾಗುತ್ತಿದ್ದಂತೆ 58 ನಿಮಿಷದಲ್ಲಿ ವೀರಾಜಪೇಟೆ ತಂಡದ ಆಟಗಾರ ಡಿ. ಆವರಣದಲ್ಲಿ ಮಾಡಿದ ತಪ್ಪಿಗೆ ತೀರ್ಪುಗಾರ ಕೊಕ್ಕಂಡ ರೋಷನ್ ಪೆನಾಲ್ಟಿ ಸ್ಟ್ರೋಕ್ ನೀಡಿದರು. ಪರದಂಡ ಮೊಣ್ಣಪ್ಪ ಗೋಲಾಗಿ ಪರಿವರ್ತಿಸಿದರೂ ಸೋಲಿಗೆ ಶರಣಾಗಬೇಕಾಯಿತು.ತೀರ್ಪುಗಾರರಾಗಿ ಕೊಕ್ಕಂಡ ರೋಷನ್, ಬೊಳ್ಳಚಂಡ ನಾಣಯ್ಯ, ತಾಂತ್ರಿಕ ಸಮಿತಿಯಲ್ಲಿ ಚಂದಪಂಡ ಆಕಾಶ್, ಕರವಂಡ ಅಪ್ಪಣ್ಣ, ಕುಪ್ಪಮಡ ದಿಲನ್ ಬೋಪಣ್ಣ, ತಾಂತ್ರಿಕ ಸಮಿತಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್ ಮುತ್ತಪ್ಪ ಕಾರ್ಯ ನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.
ಪುರುಷರ ಹಗ್ಗಜಗ್ಗಾಟದ ಫೈನಲ್ಸ್‍ನಲ್ಲಿ ನಾಪೋಕ್ಲು ಕೊಡವ ಸಮಾಜ ವೀರಾಜಪೇಟೆ ಕೊಡವ ಸಮಾಜವನ್ನು ಸೋಲಿಸಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಮಡಿಕೇರಿ ಕೊಡವ ಸಮಾಜ ನಾಪೋಕ್ಲು ಕೊಡವ ಸಮಾಜವನ್ನು ಪರಾಭವಗೊಳಿಸಿತು.
ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ
ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಕೊಡವ ನಮ್ಮೆಯ ಸಮಾರೋಪ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ದುಡಿಕೊಟ್ಟುವದರ ಮೂಲಕ ಉದ್ಘಾಟಿಸಿದರು.
(ಮೊದಲ ಪುಟದಿಂದ)
ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷ ಕಳ್ಳಚಂಡ ವಿಷ್ಣು ಕಾರ್ಯಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ನಾಪಂಡ ಕಾಳಪ್ಪ, ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ನಾಣಯ್ಯ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದ ವಿಜೇತರು: ಕೋಲಾಟ್ ಮಕ್ಕಂದೂರು ಕೊಡವ ಸಮಾಜ (ಪ್ರ), ಬೆಂಗಳೂರು ಕೊಡವ ಸಮಾಜ (ದ್ವಿ), ಮೈಸೂರು ಕೊಡವ ಸಮಾಜ(ತೃ)
ಬೊಳಕಾಟ್: ಬೆಂಗಳೂರು ಕೊಡವ ಸಮಾಜ (ಪ್ರ) ಮೈಸೂರು ಕೊಡವ ಸಮಾಜ (ದ್ವಿ), ಮಕ್ಕಂದೂರು ಕೊಡವ ಸಮಾಜ (ತೃ)
ಕತ್ತಿಯಾಟ್: ಮೈಸೂರು ಕೊಡವ ಸಮಾಜ (ಪ್ರ), ಬೆಂಗಳೂರು ಕೊಡವ ಸಮಾಜ (ದ್ವಿ), ಮಕ್ಕಂದೂರು ಕೊಡವ ಸಮಾಜ (ತೃ)
ಉಮ್ಮತಾಟ್: ಬೆಂಗಳೂರು ಕೊಡವ ಸಮಾಜ (ಪ್ರ), ಮಡಿಕೇರಿ ಕೊಡವ ಸಮಾಜ (ದ್ವಿ), ಮೈಸೂರು ಕೊಡವ ಸಮಾಜ (ತೃ)
ಬಾಲೋಪಾಟ್: ಮಕ್ಕಂದೂರು ಕೊಡವ ಸಮಾಜ (ಪ್ರ), ಮೈಸೂರು ಕೊಡವ ಸಮಾಜ (ದ್ವಿ), ನಾಪೋಕ್ಲು ಕೊಡವ ಸಮಾಜ (ತೃ)
ಪರಿಯಕಳಿ: ಮಕ್ಕಂದೂರು ಕೊಡವ ಸಮಾಜ (ಪ್ರ), ಮೈಸೂರು ಕೊಡವ ಸಮಾಜ (ದ್ವಿ), ನಾಪೋಕ್ಲು ಕೊಡವ ಸಮಾಜ (ತೃ)
ಸಂಬಂದ ಅಡಕುವ: ಮೈಸೂರು ಕೊಡವ ಸಮಾಜ (ಪ್ರ), ನಾಪೋಕ್ಲು ಕೊಡವ ಸಮಾಜ (ದ್ವಿ), ಬೆಂಗಳೂರು ಕೊಡವ ಸಮಾಜ(ತೃ)
ತಾಲಿಪಾಟ್: ಮೈಸೂರು ಕೊಡವ ಸಮಾಜ (ಪ್ರ), ವೀರಾಜಪೇಟೆ ಕೊಡವ ಸಮಾಜ (ದ್ವಿ), ಬೆಂಗಳೂರು ಕೊಡವ ಸಮಾಜ (ತೃ)
ಕಪ್ಪೆಯಾಟ್: ಮಡಿಕೇರಿ ಕೊಡವ ಸಮಾಜ (ಪ್ರ), ಬೆಂಗಳೂರು ಕೊಡವ ಸಮಾಜ (ದ್ವಿ), ಪೊನ್ನಂಪೇಟೆ ಕೊಡವ ಸಮಾಜ (ತೃ) ಸ್ಥಾನ ಪಡೆದುಕೊಂಡರು.