ಮಡಿಕೇರಿ, ಅ. 11: ಕೊಡಗಿನ ಕ್ರೀಡಾಪಟುಗಳಿಗೆ ಕ್ರೀಡೆಗೆ ಸಂಬಂಧಿಸಿದ ಮೂಲ ಭೂತ ಸೌಲಭ್ಯಗಳು ದೊರಕಿಲ್ಲ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡುವಂತ ಕೆಲಸ ಆಗಬೇಕಾಗಿದೆ ಎಂದು ಜೆಡಿಎಸ್ ಪ್ರಮುಖ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಮಡಿಕೇರಿ ತಾಲೂಕಿನ ಮರಂದೋಡ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 37ನೇ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡಾ ಸಮಿತಿ ಅಧ್ಯಕ್ಷ ಚೋಯಮಾಡಂಡ ಎ. ಹರೀಶ್ ಮೊಣ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ 37 ವರ್ಷಗಳಿಂದಲೂ ಕ್ರೀಡೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಮಕ್ಕಳು ಧೈರ್ಯದಿಂದ ತಮ್ಮ ಪ್ರತಿಭೆಯನ್ನು ತೋರುವ ಮೂಲಕ ಜಿಲ್ಲೆ, ರಾಜ್ಯ ಮಟ್ಟದಲ್ಲಿಯು ಭಾಗವಹಿಸು ವಂತಾಗಬೇಕು ಎಂದರು. ವೇದಿಕೆಯಲ್ಲಿ ಮರಂದೋಡ ಪಶು ವೈದ್ಯಾಧಿಕಾರಿ ಡಾ. ಬೊಳ್‍ಕ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪೂವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ರಮೇಶ್, ಕಕ್ಕಬೆÉ ಸಹಕಾರ ಸಂಘದ ಎನ್. ಹರೀಶ್, ಕೆ. ಗಿರೀಶ್ ಇತರರು ಉಪಸ್ಥಿತರಿದ್ದರು.

ಕ್ರೀಡಾ ಸಮಿತಿಯ ಮಾಜಿ ಅಧ್ಯಕ್ಷ ಚಂಡೀರ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ರಾಷ್ಟ್ರ ಮಟ್ಟದ ಹಾಕಿ ಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಬಾರಿಕೇರ ಜೀವಿತ ಮತ್ತು ಕಲಾವಿದ ಅನ್ನಡಿಯಂಡ ವಿಕಾಸ್ ಉತ್ತಯ್ಯ ಅವರನ್ನು ಗೌರವಿಸಲಯಿತು. ಮೊದಲಿಗೆ ಫ್ರೀದಾ ಪೂವಯ್ಯ ಮಹಿಳಾ ಹಗ್ಗಜಗ್ಗಾಟವನ್ನು ಉದ್ಘಾಟಿಸಿದರು. ಚಂಡೀರ ರ್ಯಾಲಿ ಗಣಪತಿ ಸ್ವಾಗತಿಸಿ ನಿರೂಪಿಸಿದರೆ, ಗೌರವ ಕಾರ್ಯದರ್ಶಿ ಮುಕ್ಕಾಟಿರ ಅಜಿತ್ ವಂದಿಸಿದರು.