ಚೆಟ್ಟಳ್ಳಿ, ಅ. 11: ಚೆಟ್ಟಳ್ಳಿ ಗ್ರೇಡ್-1 ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಗ್ರಾಮಸಭೆ ತಾ. 16 ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯಿತಿ ಸಮುದಾಯ ಭವನದಲ್ಲಿ ಅಧ್ಯಕ್ಷೆ ಪಿ.ವಿ. ವತ್ಸಲ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಭೆಯಲ್ಲಿ ಆಹ್ವಾನಿತರಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಎಂ.ಬಿ. ಸುನಿತಾ, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ನೋಡಲ್ ಅಧಿಕಾರಿಯಾಗಿ ಪಶುವೈದ್ಯಾಧಿಕಾರಿ ಸಂಜೀವಕುಮಾರ್ ಆರ್. ಸಿಂಧೆ ಭಾಗವಹಿಸಲಿರುವರು.