ವೀರಾಜಪೇಟೆ, ಅ. 11: ಬಾಳುಗೋಡುವಿನಲ್ಲಿ ಕೊಡವ ಸಮಾಜ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೊಡವ ನಮ್ಮೆಯ ಹಾಕಿ ಪಂದ್ಯಾಟವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉದ್ಘಾಟಿಸಿದರು. ಮೂರು ದಿನಗಳ ಕಾಲ ನಡೆಯುವ ನಾಕೌಟ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಆರಾಯಿರ ನಾಡು, ಗೋಣಿಕೊಪ್ಪ, ಕುಶಾಲನಗರ, ನಾಪೋಕ್ಲು, ಕುಟ್ಟ, ಮ್ಯೆಸೂರು, ಬೆಂಗಳೂರು, ಮೂರ್ನಾಡು, ಮಡಿಕೇರಿ ಕೊಡವ ಸಮಾಜಗಳು ಭಾಗವಹಿಸುತ್ತಿವೆ. ಗುಂಡು ಹೊಡೆದು ಚಾಲನೆ: ಕೊಡವ ಸಮಾಜ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ ವೀರಾಜಪೇಟೆ, ಅ. 11: ಬಾಳುಗೋಡುವಿನಲ್ಲಿ ಕೊಡವ ಸಮಾಜ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೊಡವ ನಮ್ಮೆಯ ಹಾಕಿ ಪಂದ್ಯಾಟವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉದ್ಘಾಟಿಸಿದರು. ಮೂರು ದಿನಗಳ ಕಾಲ ನಡೆಯುವ ನಾಕೌಟ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಆರಾಯಿರ ನಾಡು, ಗೋಣಿಕೊಪ್ಪ, ಕುಶಾಲನಗರ, ನಾಪೋಕ್ಲು, ಕುಟ್ಟ, ಮ್ಯೆಸೂರು, ಬೆಂಗಳೂರು, ಮೂರ್ನಾಡು, ಮಡಿಕೇರಿ ಕೊಡವ ಸಮಾಜಗಳು ಭಾಗವಹಿಸುತ್ತಿವೆ.
ಗುಂಡು ಹೊಡೆದು ಚಾಲನೆ: ಕೊಡವ ಸಮಾಜ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಕೋವಿಯ ಹಕ್ಕನ್ನು ಉಳಿಸಿಕೊಡುವದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚೆರಿಯಪಂಡ ಕಾಶಿಯಪ್ಪ,
(ಮೊದಲ ಪುಟದಿಂದ) ಸಾಂಸ್ಕøತಿಕ ಸಮಿತಿ ಸಂಚಾಲಕ ಕಾಳಿಮಾಡ ಮೋಟಯ್ಯ, ಕ್ರೀಡಾ ಸಮಿತಿ ಸಂಚಾಲಕ ಕಂಬೀರಂಡ ಕಿಟ್ಟು ಕಾಳಪ್ಪ, ಹಾಕಿ ತಾಂತ್ರಿಕ ಸಮಿತಿ ಅಧ್ಯಕ್ಷ ಕಾಟುಮಣಿಯಂಡ ಉಮೇಶ್, ಕ್ರೀಡಾ ಸಮಿತಿ ಅಧ್ಯಕ್ಷ ರಾಜೀವ್ ಬೋಪಯ್ಯ ಉಪಸ್ಥಿತರಿದ್ದರು.
ಪರಂಪರೆ ಬದಲಾಗಿಲ್ಲ
ಕೊಡವರ ಜೀವನ ಶೈಲಿಯಲ್ಲಿ ಅಂದಿಗೂ ಇಂದಿಗೂ ಹಲವಾರು ಬದಲಾವಣೆಗಳನ್ನು ಕಾಣುತ್ತಿದ್ದು, ಸಂಸ್ಕøತಿ ಆಚಾರ ವಿಚಾರ ಪದ್ಧತಿ - ಪರಂಪರೆಗಳು ಬದಲಾಗಿಲ್ಲ ಎಂದು ಮಡಿಕೇರಿ ಎಫ್‍ಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಂಡೇಪಂಡ ಪುಷ್ಪಾ ಕುಟ್ಟಣ್ಣ ಹೇಳಿದರು.
ಬಾಳುಗೋಡುವಿನಲ್ಲಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕೊಡಗು ಎಂದರೆ ಶಿಕ್ಷಣ ಮತ್ತು ಕಾಫಿ. ಈಗಲೂ ನಮ್ಮದು ಕೃಷಿ ಪ್ರಧಾನ ಜಿಲ್ಲೆ. ನಾವು ಕೃಷಿಗೆ ಅವಲಂಭಿತರಾಗಿದ್ದೇವೆ. ಸಮಾಜ, ವಿಜ್ಞಾನ, ತಾಂತ್ರಿಕತೆ ಬದಲಾವಣೆ ಆಗುವಾಗ ನಮ್ಮ ಜೀವನ ಶೈಲಿಯು ಬದಲಾಗುತ್ತದೆ. ಧಾರ್ಮಿಕತೆ, ಮನೋರಂಜನೆ, ಕೂಡು ಕುಟುಂಬಗಳು ಮಾಯವಾಗಿ ಸಣ್ಣ ಕುಟುಂಬಗಳಾಗಿ ಮಾರ್ಪಡಾಗುತ್ತಿವೆÉ. ಹಿಂದೆ ಐನ್‍ಮನೆಗಳು ಸಾಂಸ್ಕøತಿಕ ಕೇಂದ್ರವಾಗಿದ್ದವು. ಎಲ್ಲಾ ಚಟುವಟಿಕೆಗಳು ಅಲ್ಲಿಯೆ ನಡೆಯುತ್ತಿದ್ದವು. ಇಂದು ಐನ್‍ಮನೆಗಳಿಗೆ ವರ್ಷಕ್ಕೆ ಒಂದು ಬಾರಿ ಭೇಟಿ ನೀಡುವ ಪರಿಸ್ಥಿತಿ ಎದುರಾಗಿದೆ. ನಾವು ಪಕೃತಿಯನ್ನು ಪೂಜಿಸುವದರಿಂದ ಅದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕೊಡವ ಸಮಾಜಗಳಿಗೆ ಹೂ ಜೋಡಣೆ, ಹಣ್ಣು ಮತ್ತು ತರಕಾರಿಗಳಿಂದ ಕಲಾಕೃತಿ ರಚನೆ, ಚಕ್ಕುಲಿ ಮತ್ತು ಡಸೆರ್ಟ್ ತಿಂಡಿಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬಹುಮಾನ: ಹೂ ಜೋಡಣೆಯಲ್ಲಿ ಅಮ್ಮತ್ತಿ ಕೊಡವ ಸಮಾಜ (ಪ್ರ), ಗೋಣಿಕೊಪ್ಪ (ದ್ವಿ), ವೀರಾಜಪೇಟೆ (ತೃ), ತರಕಾರಿ ಕೆತ್ತನೆಯಲ್ಲಿ ಆರಾಯಿನಾ ನಾಡು ವೀರಾಜಪೇಟೆ (ಪ್ರ), ಅಮ್ಮತ್ತಿ (ದ್ವಿ), ತಿಂಡಿ ಡೆಸೆರ್ಟ್‍ನಲ್ಲಿ ಬಾಳುಗೋಡು ಸಮಾಜ (ಪ್ರ), ವೀರಾಜಪೇಟೆ ಕೊಡವ ಸಮಾಜ (ದ್ವಿ), ನಾಪೋಕ್ಲು ಕೊಡವ ಸಮಾಜ (ತೃ), ಚಕ್ಕುಲಿ ಸ್ಫರ್ಧೆಯಲ್ಲಿ ನಾಪೋಕ್ಲು ಸಮಾಜ (ಪ್ರ), ಬಾಳುಗೋಡು ಸಮಾಜ (ದ್ವಿ), ವೀರಾಜಪೇಟೆ ಕೊಡವ ಸಮಾಜ (ತೃ) ಸ್ಥಾನ ಪಡೆದುಕೊಂಡಿತು.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಫರ್ಧೆಯಲ್ಲಿ ಬಡುವಂಡ ಮುತ್ತಪ್ಪ (ಪ್ರ), ಮಂಡುಡ ಅಜೀತ್ (ದ್ವಿ), ಮಂಡೆಪಂಡ ಮಂಜು (ತೃ) ಸ್ಥಾನ ಪಡೆದುಕೊಂಡರು.