ನಾಪೆÇೀಕ್ಲು, ಅ. 11: ಜೆಸಿಬಿ ಟಯರ್‍ಗೆ ಗಾಳಿ ತುಂಬಿಸುವ ಸಮಯದಲ್ಲಿ ಟಯರ್ ಸ್ಫೋಟಗೊಂಡು ಟಯರ್ ಮೇಲೆ ನಿಂತಿದ್ದ ವ್ಯಕ್ತಿ ಮೇಲಕ್ಕೆ ಎಸೆಯಲ್ಪಟ್ಟು ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗೆ ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.

ಕಕ್ಕಬ್ಬೆಯಲ್ಲಿ ಮಣ್ಣಿನ ಕೆಲಸ ಕಾರ್ಯ ನಿರ್ವಹಿಸುತ್ತಿದ್ದ ಜೆಸಿಬಿಯ ಟಯರ್‍ಗೆ ಗಾಳಿ ತುಂಬಿಸಲು ಮೂಲತಃ ತಮಿಳುನಾಡು ಸೇಲಂ ನಿವಾಸಿ ಪ್ರದೀಪ್ ನಾಪೆÇೀಕ್ಲು ಸಮೀಪದ ಹಳೇ ತಾಲೂಕಿನ ಜಗದೀಶ್ ಎಂಬವರಿಗೆ ಸೇರಿದ ಟಯರ್ ವಕ್ರ್ಸ್‍ಗೆ ತಂದಿದ್ದರು. ಟಯರ್‍ಗೆ ಗಾಳಿ ತುಂಬಿಸುವ ಸಮಯದಲ್ಲಿ ಪ್ರದೀಪ್ ಟಯರ್ ಮೇಲೆ ನಿಂತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಟಯರ್ ಸ್ಫೋಟಗೊಂಡ ತೀವ್ರತೆಗೆ ಟಯರ್ ಮೇಲೆ ನಿಂತಿದ್ದ ಪ್ರದೀಪ್ ಮೇಲಕ್ಕೆ ಎಸೆಯಲ್ಪಟ್ಟ ಪರಿಣಾಮ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಸುಟ್ಟ ಗಾಯಗಳಿಂದ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ನಾಪೆÇೀಕ್ಲು ಪೆÇಲೀಸ್ ಠಾಣಾ ಎ.ಎಸ್.ಐ ದೇವರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಂಡಿದ್ದಾರೆ.

-ಚಿತ್ರ : ದುಗ್ಗಳ