ಗೋಣಿಕೊಪ್ಪ ವರದಿ, ಅ. 11 : ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ತಾ. 12 ರಿಂದ (ಇಂದಿನಿಂದ) ಮಾನಿಲ್ ಅಯ್ಯಪ್ಪ ಕೊಡವ-ಅಮ್ಮಕೊಡವ ವಾಲಿಬಾಲ್ ಟೂರ್ನಿ ಆರಂಭಗೊಳ್ಳಲಿದೆ.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ ಮತ್ತು ಕೊಡವ ಕೂಟ ಸಹಯೋಗದಲ್ಲಿ ಆಯೋಜಿಸಿರುವ ಚೆಪ್ಪುಡೀರ ಅಚ್ಚಯ್ಯ ಸ್ಮಾರಕ ಕೊಡವ-ಅಮ್ಮಕೊಡವ ವಾಲಿಬಾಲ್ ಕಪ್ ಟೂರ್ನಿ ತಾ. 12 ಮತ್ತು 13 ರಂದು ನಡೆಯಲಿದ್ದು, 18 ತಂಡಗಳು ಸೆಣೆಸಾಟ ನಡೆಸಲಿದೆ.
ತಾ. 12 ರಂದು ಬೆ. 9.30 ಕ್ಕೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ದಾನಿಯಾದ ಕೊಂಗಂಡ ಗಣಪತಿ, ಚೆಪ್ಪುಡೀರ ಅಯ್ಯಪ್ಪ, ಕೊಡಂದೇರ ತಿಮ್ಮಯ್ಯ, ಮದ್ರೀರ ಕರುಂಬಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.
ತಾ. 13 ರಂದು ತೆಂಗಿನ ಕಾಯಿಗೆ ಗುಂಡು ಹೊಡೆಯವ ಸ್ಪರ್ಧೆ, ವಾಲಗತ್ತಾಟ್ ಪೈಪೋಟಿ ನಡೆಯಲಿದೆ. ನಾಣಮಂಡ ವೇಣು ಮಾಚಯ್ಯ ತಂಡದಿಂದ ಕೊಡವ ಪಾಟ್ ಕಾರ್ಯಕ್ರಮವಿದೆ. ಮ. 2.30 ಕ್ಕೆ ನಡೆಯುವ ಸಮಾರೋಪಕ್ಕೆ ಮುಖ್ಯ ಅತಿಥಿಯಾಗಿ ದಾನಿ ಜಮ್ಮಡ ಸಿ. ಮೋಹನ್, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ದಾನಿ ಕಾಳಪಂಡ ಟಿಪ್ಪು ಬಿದ್ದಪ್ಪ, ಕಲಾವಿದ ನಾಣಮಂಡ ವೇಣು ಮಾಚಯ್ಯ ಪಾಲ್ಗೊಳ್ಳಲಿದ್ದಾರೆ.