ಚೆಟ್ಟಳ್ಳಿ, ಅ. 11: ಕಾಫಿ ಲವ್ವರ್ಸ್ ಫುಟ್ಬಾಲ್ ಕ್ಲಬ್ ಚೆಟ್ಟಳ್ಳಿ ವತಿಯಿಂದ ದಸರಾ ಪ್ರಯುಕ್ತ ಚೆಟ್ಟಳ್ಳಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಏಕದಿನ ಕಾಲ್ಚೆಂಡು ಪಂದ್ಯಾಟದಲ್ಲಿ ಕಾಫಿ ಸಿಟಿ ಕಾಫಿ ಬೋರ್ಡ್ ಪ್ರಥಮ ಹಾಗೂ ನಾರ್ತ್ ಕ್ಲಬ್ ಕಂಡಕರೆ ದ್ವಿತೀಯ ಸ್ಥಾನ ಪಡೆಯಿತು. ಫೈನಲ್ ಪಂದ್ಯಾಟದಲ್ಲಿ ಸಿ.ಸಿ.ಎಫ್.ಸಿ. ತಂಡವು 2-1 ಗೋಲುಗಳ ಅಂತರದಿಂದ ಕೆ.ಎನ್.ಸಿ. ತಂಡವನ್ನು ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಪ್ರಥಮ ಸ್ಥಾನ ಪಡೆದ ಸಿ.ಸಿ.ಎಫ್. ಕಾಫಿ ಬೋರ್ಡ್ ತಂಡದಲ್ಲಿ ನಾಯಕ ಸುರೇಶ್, ಹರ್ಷಿತ್, ಆಶಿಕ್, ಫಯಾಜ್, ಸುದೀಶ್, ದೀಕ್ಷಿತ್ ಹಾಗೂ ಲಕ್ಷ್ಮಣ್ ಇದ್ದರು
ದ್ವಿತೀಯ ಸ್ಥಾನ ಪಡೆದ ನಾರ್ತ್ ಕ್ಲಬ್ ಕಂಡಕರೆ ತಂಡದಲ್ಲಿ ನಾಯಕ ಇಬ್ರಾಹಿಂ, ಆಲಿ, ಫಾರೂಖ್, ಇಸ್ಮಾಯಿಲ್, ಅಜಿನಾನ್, ಆಬಿದ್, ರಶೀದ್ ಹಾಗೂ ಅಬುತಾಯಿರ್ ಇದ್ದರು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಆತಿಥೇಯ ಕಾಫಿ ಲವ್ವರ್ಸ್ ಹಾಗೂ ಸಿ.ಸಿ.ಎಫ್.ಸಿ. ಕಾಫಿ ಬೋರ್ಡ್ ತಂಡಗಳ ನಡುವೆ ನಡೆಯಿತು.
ಸಿ.ಸಿ.ಎಫ್.ಸಿ. ತಂಡವು 3-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು.
ಜಿದ್ದಾಜಿದ್ದಿನ ಎರಡನೇ ಸೆಮಿಫೈನಲ್ ಪಂದ್ಯವು ನಾರ್ತ್ ಕ್ಲಬ್ ಕಂಡಕರೆ ಹಾಗೂ ಬ್ಲೂ ಟೈಗರ್ಸ್ ಚೆಟ್ಟಳ್ಳಿ ತಂಡಗಳ ನಡುವೆ ನಡೆಯಿತು. ಎರಡು ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿತು.
ಪೆನಾಲ್ಟಿ ಶೂಟೌಟ್‍ನಲ್ಲಿ ಕೆ.ಎನ್.ಸಿ ಕಂಡಕರೆ ತಂಡವು 3-2 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆಯಿತು. ಪಂದ್ಯಾಟದಲ್ಲಿ ಒಟ್ಟು 15 ತಂಡಗಳ ಭಾಗವಹಿಸಿದ್ದವು. ಪಂದ್ಯಾಟದ ಅತ್ಯುತ್ತಮ ಆಟಗಾರ ಸಿ.ಸಿ.ಎಫ್.ಸಿ ತಂಡದ ನಾಯಕ ಸುರೇಶ್, ಬೆಸ್ಟ್ ಗೋಲ್ ಕೀಪರ್ ಕೆ.ಎನ್.ಸಿ ತಂಡದ ಆಲಿ, ಅತ್ಯುತ್ತಮ ಡಿಫೆಂಡರ್ ಕಾಫಿ ಲವ್ವರ್ಸ್ ತಂಡದ ಜಂಶೀದ್, ಅತೀ ಹೆಚ್ಚು ಗೋಲುಗಳಿಸಿದ ಆಟಗಾರ ಕೆ.ಎನ್.ಸಿ ತಂಡದ ಅಬುತಾಯಿರ್, ಶಿಸ್ತಿನ ಆಟಗಾರ ಬ್ಲೂ ಟೈಗರ್ಸ್ ತಂಡದ ರಹೀಮ್, ಹಾಗೂ ಎಮರ್ಜಿಂಗ್ ಆಟಗಾರ ಪ್ರಶಸ್ತಿಯನ್ನು ಬ್ಲೂ ಟೈಗರ್ಸ್ ತಂಡದ ಅಜಿತ್ ಪಡೆದುಕೊಂಡರು. ಪಂದ್ಯಾಟ ತೀರ್ಪುಗಾರರಾಗಿ ವಿನೋದ್, ಜಂಶಾದ್ ಹಾಗೂ ಆಲಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಪಂದ್ಯಾಟದ ಆಯೋಜಕರಾದ ಜಗನ್, ರವಿ, ಹರೀಶ್, ರಾಫಿ, ಕೆ.ಎನ್.ಸಿ. ಕಂಡಕರೆ ತಂಡದ ಕೋಚ್ ಸುಹೈಲ್, ಸಚಿನ್, ಪ್ರಜ್ವಲ್, ಜಂಶೀದ್, ಲೂಯಿಸ್, ಸುಚಿತ್, ಹರೀಶ್, ಇದ್ದರು.