ಸೋಮವಾರಪೇಟೆ, ಅ. 11: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಗೌಡಳ್ಳಿ ಬಿಜಿಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ಪ್ರಾರಂಭವಾಗಿದ್ದು, ಮುಂದಿನ ಒಂದು ವಾರಗಳ ಕಾಲ ನಡೆಯಲಿದೆ.

ಜಿಲ್ಲೆಯ ಮೂರೂ ತಾಲೂಕುಗಳ ವಿವಿಧೆಡೆಗಳಿಂದ 162 ಮಂದಿ ಶಿಬಿರಾರ್ಥಿಗಳು ಭಾಗಿಯಾಗಿದ್ದು, ಆರ್‍ಎಸ್‍ಎಸ್‍ನ ಹಿರಿಯ ಅಧಿಕಾರಿಗಳು, ಪ್ರಮುಖರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.