ಮಡಿಕೇರಿ, ಅ. 11: ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಪ್ರಕೃತ್ತಿ ವಿಕೋಪದಿಂದ ಸಂತ್ರಸ್ತರಾದ ಕೆಲವು ಕುಟುಂಬದವರಿಗೆ ನೆರವು ನೀಡಲಾಯಿತು.

ಮಡಿಕೇರಿಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಅನ್ನದಾನಿ ಮೇಟಿ, ಉಪಾಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಕೊಡಗು ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ನವೀನ್, ಕಾರ್ಯದರ್ಶಿ ಡಾ.ಸಿ.ಆರ್. ಪ್ರಶಾಂತ್, ಖಜಾಂಚಿ ಡಾ. ಎನ್.ಎ. ಸುಧಾಕರ್, ಹಿಂದಿನ ಸಾಲಿನ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ , ನಿರ್ದೇಶಕರಾದ ಡಾ. ಬಿ.ಕೆ. ರಾಜೇಶ್ವರಿ, ಡಾ. ಅಯ್ಯಪ್ಪ ಸಂಘದ ಪರವಾಗಿ ಆರ್ಥಿಕ ನೆರವು ನೀಡಿದರು.

22 ಸಂತ್ರಸ್ತರಿಗೆ ತಲಾ ರೂ. 25 ಸಾವಿರದಂತೆ ಒಟ್ಟು ರೂ. 6 ಲಕ್ಷಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಕಳೆದ ವರ್ಷದ ಪ್ರಕೃತಿ ವಿಕೋಪ ಸಂದರ್ಭ ಭೂಕುಸಿತದಲ್ಲಿ ಸಾವನ್ನಪ್ಪಿದ್ದ ಫ್ರಾನ್ಸಿಸ್ ಮೋಂತಾರಿಯೋ ಅವರ ಪತ್ನಿ ಫ್ಲಾವಿಯಾ ಜ್ಯೋತಿ ಅವರಿಗೆ ರೂ. 1 ಲಕ್ಷ ಆರ್ಥಿಕ ನೆರವು ನೀಡಲಾಯಿತು. ಇನ್ನೂ ರೂ. 20 ಲಕ್ಷಗಳನ್ನು ಆಯ್ದ ಸಂತ್ರಸ್ತರಿಗೆ ಶೀಘ್ರದಲ್ಲಿಯೇ ವಿತರಿಸುವದಾಗಿ ಡಾ.ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.