ಶನಿವಾರಸಂತೆ, ಅ. 11: ಗೌಡಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಉಚಿತ ಸೈಕಲ್‍ಗಳನ್ನು ವಿತರಿಸಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ, ಮುಖ್ಯ ಶಿಕ್ಷಕ ಎನ್.ಕೆ. ನಾಗೇಂದ್ರ, ಶಿಕ್ಷಕ ಕೆ.ಸಿ. ಮಹೇಶ್ ಇತರರು ಹಾಜರಿದ್ದರು.