ನಾಪೆÇೀಕ್ಲು, ಅ. 11: ಸರಕಾರ ಯಂತ್ರಗಳ ಮೂಲಕ ನಾಟಿ ಮಾಡಿದ ಭತ್ತದ ಕೃಷಿಕರಿಗೆ ಮಾತ್ರ ಹೆಕ್ಟೇರ್‍ಗೆ 7500 ರೂ. ಪೆÇ್ರೀತ್ಸಾಹ ಧನ ನೀಡಲು ನಿರ್ಧರಿಸಿದ್ದು, ತಾರತಮ್ಯದ ಧೋರಣೆಯಾಗಿದೆ ಎಂದು ಕೃಷಿಕ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ತ ಮಾರುಕಟ್ಟೆ ಇಲ್ಲದಿರುವದು, ಬೆಲೆ ಕುಸಿತ, ದುಬಾರಿ ಕೂಲಿ, ಪ್ರಕೃತಿ ವಿಕೋಪ, ಕಾಡುಪ್ರಾಣಿಗಳ ಉಪಟಳದಿಂದ ಜಿಲ್ಲೆಯಲ್ಲಿ ಭತ್ತದ ಕೃಷಿ ಮಾಡುವವರು ವಿರಳವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಯಂತ್ರಗಳ ಮೂಲಕ ನಾಟಿ ಮಾಡಿದ ಕೃಷಿಕರಿಗೆ ಮಾತ್ರ ಪೆÇ್ರೀತ್ಸಾಹ ಧನ ನೀಡಲು ಕ್ರಮಕೈಗೊಂಡಿದ್ದು, ಕೂಲಿ ಆಳುಗಳ ಮೂಲಕ ಕೃಷಿ ಮಾಡಿದವರಿಗೆ ಅನ್ಯಾಯ ಮಾಡುತ್ತಿರುವದು ಸರಿಯಲ್ಲ ಎಂದರು.

ಈ ಪ್ರದೇಶಗಳಲ್ಲಿ ಕಾಡು ಹಂದಿಯಿಂದ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಎಲ್ಲಾ ಬೆಳೆಗಳು ಅವುಗಳ ಪಾಲಾಗುತ್ತಿದೆ. ಆದುದರಿಂದ ಸರಕಾರ ಕಾಡು ಹಂದಿಗೆ ಗುಂಡು ಹಾರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ ಅವರು, ಎಲ್ಲಾ ಕೃಷಿಕರಿಗೆ ಒಂದೇ ರೀತಿಯ ಕಾನೂನು ಹೊರಡಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎನ್.ಎಸ್. ಉದಯಶಂಕರ್, ಅರೆಯಡ ಅಶೋಕ್, ಪಾಡಿಯಮ್ಮಂಡ ಮನು ಮಹೇಶ್, ಬೊಪ್ಪಂಡ ಕಾಶಿ ನಂಜಪ್ಪ, ಕೇಲೇಟಿರ ಸಾಬು ನಾಣಯ್ಯ, ಕಂಗಾಂಡ ಜಾಲಿ ಪೂವಪ್ಪ ಇದ್ದರು.