ಕುಶಾಲನಗರ, ಅ. 11: ಜಿಲ್ಲೆಯಲ್ಲಿ ಕಾಪೆರ್Çರೇಷನ್ ಬ್ಯಾಂಕ್ ಅಗ್ರಣೀ ಬ್ಯಾಂಕ್ ಆಗಿದ್ದು, ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಬ್ಯಾಂಕ್ ಮಹಾ ಪ್ರಬಂಧಕಿ ಮೀನಾಕ್ಷಿ ಸುಂದರಂ ಹೇಳಿದರು.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ನಿರ್ದೇಶನದಂತೆ ನಡೆದ ಗ್ರಾಹಕರ ಆರ್ಥಿಕ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಡಿಕೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಬಹಳ ಉತ್ಸುಕತೆಯಿಂದ ಪಾಲ್ಗೊಂಡಿದ್ದು, ಕಾಪೆರ್Çರೇಷನ್ ಬ್ಯಾಂಕ್ ವತಿಯಿಂದ ಕೃಷಿ ವಲಯ 1.9 ಕೋಟಿ, ಮುದ್ರಾ ಯೋಜನೆ 0.53 ಕೋಟಿ, ಕಿರು ಮತ್ತು ಸಣ್ಣ ಉದ್ಯಮ 0.05 ಕೋಟಿ, ಮನೆ ಸಾಲ 1.79 ಕೋಟಿ, ಇತರೆ ಸಾಲ 3.58 ಕೋಟಿ ಸೇರಿ ಒಟ್ಟು ಎಲ್ಲಾ ಬ್ಯಾಂಕುಗಳಿಂದ ಕೃಷಿ ವಲಯ 4.7 ಕೋಟಿ, ಮುದ್ರಾ ಯೋಜನೆ 1.44 ಕೋಟಿ, ಕಿರು ಮತ್ತು ಸಣ್ಣ ಉದ್ಯಮ 4.75 ಕೋಟಿ, ಮನೆ ಸಾಲ 8.66 ಕೋಟಿ ಹಾಗೂ ಉನ್ನತ ವ್ಯಾಸಂಗಕ್ಕಾಗಿ 1.5 ಕೋಟಿ ಹಾಗೂ ಇತರೆ ಎಲ್ಲಾ ಸಾಲಗಳು, ಒಟ್ಚು 29.64 ಕೋಟಿ ತಾತ್ವಿಕ ಮಂಜೂರಾತಿ ಪತ್ರಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಬ್ಯಾಂಕಿನ ಉನ್ನತ ಅಧಿಕಾರಿಗಳ ಮುಖಾಂತರ ಹಸ್ತಾಂತರಿಸಿದರು.

ಪ್ರಾಸ್ತಾವಿಕವಾಗಿ ಕಾಪೆರ್Çರೇಷನ್ ಬ್ಯಾಂಕಿನ ವಲಯ ಕಚೇರಿಯ ಮುಖ್ಯಸ್ಥ ಸಿ.ವಿ. ಮಂಜುನಾಥ ಮಾತನಾಡಿದರು. ಸಾಲ ವಿತರಿಸಿದ ಶಾಸಕ ಕೆ.ಜಿ. ಬೋಪಯ್ಯ, ಮಾತನಾಡಿ, ಸಾಲ ಮರುಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡಿ ಜೀವನದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಸೂಚಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಜನತೆಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರಾಕೃತಿಕ ವಿಕೋಪಕ್ಕೊಳಗಾದ ಜನರಿಗೆ ಸಾಲಗಳ ಪುನರ್ರಚನೆ ಅಥವಾ ಮರುಪಾವತಿಸಬೇಕಾಗಿರುವ ಕಂತುಗಳ ಮುಂದೂಡಿಕೆಗೆ ಸಹಕರಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ಬೋಜಮ್ಮ, ದಿನೇಶ್ ಪೈ ಇದ್ದರು.