ವೀರಾಜಪೇಟೆ, ಅ. 11: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಕ್ಲಬ್‍ನ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಕಾಲ್ಚೆಂಡು ಪಂದ್ಯಾಟ ಆಯೋಜನೆಗೊಂಡಿತ್ತು.
ವೀರಾಜಪೇಟೆ ನಗರದ ಉತ್ಸಾಹಿ ಯುವಕ ತಂಡ ಇಮ್ಮೋಟೆಲ್ ಎಫ್.ಸಿ ಕ್ಲಬ್ ಆಶ್ರಯದಲ್ಲಿ ಪ್ರಥಮ ವರ್ಷದ ಟೈಗರ್ ಫ್ಯೆ ಪಂದ್ಯಾಟವು ತಾಲೂಕು ಮೈಧಾನದಲ್ಲಿ ಆಯೋಜನೆಗೊಂಡಿತ್ತು. ಕೊಡಗು ಜಿಲ್ಲೆಗೆ ಸೀಮಿತವಾದಂತೆ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಅಮ್ಮತ್ತಿ ಮತ್ತು ಪಾಲಿಬೆಟ್ಟ ಗ್ರಾಮಗಳಿಂದ ಆಗಮಿಸಿದ್ದ ನಾಲ್ಕು ತಂಡಗಳು ಅಂತಿಮ ಸುತ್ತಿಗೆ ಪದಾರ್ಪಣೆ ಮಾಡಿದವು.
ಮಳೆಯ ಕಾರಣ ಪೆನಾಲ್ಟಿ ಶೂಟ್‍ಜೌಟ್‍ಗೆ ಮನವಿ ಮಾಡಲಾಯಿತು. ಅಂತಿಮ ಪಂದ್ಯಾಟವು ರೋಜರ್ ಎಫ್.ಸಿ ಪಾಲಿಬೆಟ್ಟ ಎ. ತಂಡ ಮತ್ತು ರೋಜರ್ ಎಫ್.ಸಿ ಬಿ ತಂಡಗಳ ಮಧ್ಯೆ ನಡೆದು 4-2 ಗೋಲುಗಳಿಂದ ರೋಜರ್ ಎಫ್.ಸಿ.ಎ ತಂಡ ವಿಜಯ ಸಾಧಿಸಿತು.
ರೋಜರ್ ಎಫ್.ಸಿ. ಪಾಲಿಬೆಟ್ಟ ಎ ತಂಡಕ್ಕೆ 5,000 ನಗದು ಮತ್ತು ಪರಿತೋಷಕ. ದ್ವಿತೀಯ ಸ್ಥಾನ ಗಳಿಸಿದ ರೋಜರ್ ಎಫ್.ಸಿ ಬಿ. ತಂಡಕ್ಕೆ 3000 ನಗದು ಮತ್ತು ಪಾರಿತೋಷಕ ನೀಡಿ ಗೌರವಿಸ ಲಾಯಿತು. ಕ್ರಮವಾಗಿ ಅಮ್ಮತ್ತಿ, ಪಾಲಿಬೆಟ್ಟ ಮತ್ತು ನೆಲ್ಲಿಹುದಿಕೇರಿ ತಂಡಗಳಲ್ಲಿ ಪಂದ್ಯಾಟದಲ್ಲಿ ಸಾಧನೆ ಮಾಡಿದ ಆಟಗಾರರಿಗೆ ವೈಯಕ್ತಿಕ ಪಾರಿತೋಷಕಗಳನ್ನು ಆಯೋಜಕರು ವಿತರಿಸಿದರು.
ವೇದಿಕೆಯಲ್ಲಿ ರಾಕೇಶ್ ಬಿದ್ದಪ್ಪ, ಚಿಲ್ಲವಂಡ ಗಣಪತಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಜೆ.ಡಿ.ಎಸ್ ಮುಖಂಡರಾದ ಪಿ.ಎ. ಮಂಜುನಾಥ್, ಪಿ. ನಿತಿನ್, ಯೊಗೇಶ್ ನಾಯ್ಡು ಮತ್ತು ಆಯೋಜಕರು ಉಪಸ್ಥಿತರಿದ್ದರು.