ಪೊನ್ನಂಪೇಟೆ, ಅ. 7: ವೀರಾಜಪೇಟೆ ಸಮೀಪದ ಅಂಬಟ್ಟಿಯ ವಲಿಯುಲ್ಲಾ ಅವರ ಹೆಸರಿನಲ್ಲಿ ಜರುಗುವ ಇತಿಹಾಸ ಪ್ರಸಿದ್ಧವಾದ ಅಂಬಟ್ಟಿ ಮೊಕ್ಕಾಂ ವಾರ್ಷಿಕ ಉರೂಸ್ ಕಾರ್ಯಕ್ರಮವು 2020ನೇ ಸಾಲಿನ ಫೆಬ್ರವರಿ 7 ರಿಂದ 11ರ ವರೆಗೆ ವಿವಿಧ ಧಾರ್ಮಿಕ ಸಮಾರಂಭಗಳೊಂದಿಗೆ ನಡೆಯಲಿದೆ. 5 ದಿನಗಳ ಕಾಲ ನಡೆಯುವ ಅದ್ಧೂರಿ ಉರೂಸ್ ಕಾರ್ಯಕ್ರಮದಲ್ಲಿ ಫೆಬ್ರವರಿ 10 ರಂದು ಸಾರ್ವಜನಿಕ ಸರ್ವಧರ್ಮ ಸಮ್ಮೇಳನ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಂಬಟ್ಟಿ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಎ.ಹೆಚ್. ಸಾದಲಿ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಕೆ. ಮುಸ್ತಫಾ ತಿಳಿಸಿದ್ದಾರೆ.