ಸುಂಟಿಕೊಪ್ಪ, ಅ. 6: ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಇತ್ತೀಚೆಗೆ ನಿವೃತ್ತರಾದ ಪಾರ್ಥ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸುಂಟಿಕೊಪ್ಪ ಹೋಬಳಿವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಂಟಿಕೊಪ್ಪ ಠಾಣೆಯ ಉಪನಿರೀಕ್ಷಕ ಬಿ. ತಿಮ್ಮಪ್ಪ ಮಾತನಾಡಿ, ಜನರ ರಕ್ಷಣೆ ನಮ್ಮ ಕರ್ತವ್ಯವಾಗಿದ್ದು, ಏನೇ ಸಮಸ್ಯೆ ಇದ್ದರೂ ತಮ್ಮಲ್ಲಿ ಮುಕ್ತವಾಗಿ ಚರ್ಚಿಸಿ ಪರಿಹಾರ ಪಡೆದುಕೊಳ್ಳಬಹುದೆಂದರು.
ಪ್ರೊಬೆಷನರಿ ಎಸ್‍ಐ ಎಂ.ಶ್ರೀನಿವಾಸ ಉಪಸ್ಥಿತರಿದ್ದರು. ಸುಂಟಿಕೊಪ್ಪ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಕಾರ್ಯದರ್ಶಿ ಸಂತೋಷ್, ಜಿಲ್ಲಾ ಸಂಚಾಲಕ ಹೆಚ್.ಎನ್. ರಮೇಶ, ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಶೇಷಮ್ಮ, ಸುಂಟಿಕೊಪ್ಪ ಮಹಿಳಾ ಘಟಕದ ಅಧ್ಯಕ್ಷ ಭವ್ಯ ಉಪಸ್ಥಿತರಿದ್ದರು. ನೂತನವಾಗಿ ಕರವೇ ಸೇರ್ಪಡೆಗೊಂಡ ಸಿಖಂದರ್, ಥೋಮಸ್ ಡಿಸೋಜ, ಬಿ.ಆರ್. ನಾರಾಯಣ, ವಿಶ್ವನಾಥ ಅವರುಗಳನ್ನು ರಕ್ಷಣಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು.